
ಜೆ.ಇ.ಇ. ಪ್ರಥಮ ಹಂತದ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳಿಂದ ಗಮನಾರ್ಹ ಸಾಧನೆ
ಮೂಡುಬಿದಿರೆ: ರಾಷ್ಟçಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಸಾಧನೆ ಮೆರೆದಿದ್ದಾರೆ.
ಮೂರು ವಿಷಯಗಳಲ್ಲಿ ಸಮಗ್ರವಾಗಿ ವಿದ್ಯಾರ್ಥಿಗಳಾದ ಪುನೀತ್ ಕುಮಾರ್ ಬಿ. ಇ. 99.6925846 ಪರ್ಸಂಟೈಲ್, ಅಕ್ಷಯ ಎಂ. ಹೆಗ್ಡೆ 99.5880183 ಪರ್ಸಂಟೈಲ್, ತುಶಾರ್ ಘನಶ್ಯಾಮ್ ಪಟೇಲ್ 99.3840016 ಪರ್ಸಂಟೈಲ್, ರೋಶನ್ ಶೆಟ್ಟಿ 99.048868 ಪಡೆದಿದ್ದಾರೆ.
98 ಪರ್ಸಂಟೈಲ್‌ಗಿಂತ ಅಧಿಕ 11 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ 34 ವಿದ್ಯಾರ್ಥಿಗಳು, 96 ಪರ್ಸಂಟೈಲ್‌ಗಿಂತ ಅಧಿಕ 58 ವಿದ್ಯಾರ್ಥಿಗಳು, 95 ಪರ್ಸಂಟೈಲ್‌ಗಿಂತ ಅಧಿಕ 76 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ.
ಭೌತಶಾಸ್ತ್ರ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ 10 ವಿದ್ಯಾರ್ಥಿಗಳು, ರಸಾಯನಶಾಸ್ತ್ರ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ 18 ವಿದ್ಯಾರ್ಥಿಗಳು ಮತ್ತು ಗಣಿತ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ 8 ವಿದ್ಯಾರ್ಥಿಗಳು ಅಂಕ ಪಡೆದು ಸಾಧನೆ ಮೆರೆದಿದ್ದಾರೆ.
ಈ ಎಲ್ಲಾ ಸಾಧನೆ ಮಾಡಿದ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್‌ನ ಎರಡು ವರ್ಷದ ಕ್ಲಾಸ್‌ರೂಮ್ ತರಬೇತಿ ಪಡೆದ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.