
ಉರುಳಿಗೆ ಬಿದ್ದ ಚಿರತೆಯ ರಕ್ಷಿಸಿದ ಅರಣ್ಯಾಧಿಕಾರಿಗಳು
Saturday, February 15, 2025
ಮೂಡುಬಿದಿರೆ: ತಾಲೂಕಿನ ಪಡುಮಾನಾ೯ಡು ಗ್ರಾ. ಪಂಚಾಯತ್ ವ್ಯಾಪ್ತಿಯ ಕಾಯರಕಟ್ಟ ಸರಕಾರಿ ಜಾಗದಲ್ಲಿ ಉರುಳಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಶನಿವಾರ ನಡೆದಿದೆ.
ಚಿರತೆಯ ಬಾಲಕ್ಕೆ ತಂತಿ ಕಟ್ಟಿದ ಗೂಟದ ಸಮೇತ ಬಂದು ಮರಕ್ಕೆ ಹತ್ತುವ ಸಮಯದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿತ್ತು. ಈ ಬಗ್ಗೆ ನಿಖರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ರಕ್ಷಿಸಿ ಕಛೇರಿಗೆ ತಂದು ಚುಚ್ಚುಮದ್ದು ನೀಡಿದ್ದಾರೆ. ಸಂಜೆ ವೇಳೆಗೆ ಅರಣ್ಯ ಪ್ರದೇಶಕ್ಕೆ ಬಿಡಲಿದ್ದಾರೆ.
ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಅರವಳಿಕೆ ತಜ್ಞರಾದ ಡಾ. ಯಶಸ್ವಿ, ಡಾ. ಮೇಘನಾ, ಉಪ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಶೆಟ್ಟಿ, ಗುರುಮೂರ್ತಿ, ಬಸಪ್ಪ ಹಲಗೇರ, ಗಸ್ತು ಅರಣ್ಯ ಪಾಲಕರಾದ ಚಂದ್ರಶೇಖರ್, ಸಂದೇಶ್, ಮಹಾಂತೇಶ, ಅರಣ್ಯ ವೀಕ್ಷಕರಾದ ನಾರಾಯಣ, ಸುಧಾಕರ ಈ ಸಂದಭ೯ದಲ್ಲಿದ್ದರು.