
ವಾರೀಸುದಾರರ ಪತ್ತೆಗಾಗಿ ಸಹಕರಿಸಿ
Tuesday, February 18, 2025
ಮೂಡುಬಿದಿರೆ: ಸದ್ರಿ ವ್ಯಕ್ತಿಯು ಫೆ.16 ರಂದು ರಾತ್ರಿ ಮೂಡುಬಿದಿರೆ ಖಾಸಗಿ ಬಸ್ಸು ನಿಲ್ದಾಣದಲ್ಲಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದಾಗಿ ರಾತ್ರಿ 11.05 ಗಂಟೆಗೆ ತಿಳಿಸಿದ್ದರು.
ವ್ಯಕ್ತಿಯ ಹೆಸರು ವಿಜಯ್ ಎಂದು ಮಾತ್ರ ತಿಳಿದು ಬಂದಿದ್ದು, ಮೃತರ ವಿಳಾಸ ತಿಳಿದಿರುವುದಿಲ್ಲ ಆದ್ದರಿಂದ ಸದ್ರಿ ವ್ಯಕ್ತಿಯ ವಾರಿಸುದಾರರ ಮಾಹಿತಿ ತಿಳಿದು ಬಂದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.