
ನಾಳೆ ಮೂಡುಬಿದಿರೆಯಲ್ಲಿ ಸಾರವ, ಕಲಾ ಸಂಗೀತೋತ್ಸವ
ಮೂಡುಬಿದಿರೆ: ‘ದಣಿದ ದನಿಗೆ ರಾಗದ ಬೆಸುಗೆ’ ಎಂಬ ಶೀಷಿ೯ಕೆಯೊಂದಿಗೆ ಸಾರವ, ಕಲಾಸಂಗೀತೋತ್ಸವ ಕಾಯ೯ಕ್ರಮವು ನಾಳೆ ಸಂಜೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಸಾರವ ಕಲಾ ಸಂಗೀತೋತ್ಸವದ ಅಧ್ಯಕ್ಷ ವಿದ್ವಾನ್ ಯಶವಂತ ಎಂ.ಜಿ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕಾಯ೯ಕ್ರಮವನ್ನು ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಲೋಗೋ ಅನಾವರಣ ಮಾಡಲಿದ್ದಾರೆ. ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸಂಗೀತ ಪ್ರಮಾಣ ಪತ್ರ ವಿತರಿಸಲಿದ್ದು, ‘ಮಾಯಕದ ಮಣಿದೀಪ’ ದೈವರಾಜೆ ಬಬ್ಬುಸ್ವಾಮಿ ಧ್ವನಿಸುರುಳಿಯನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಬಿಡುಗಡೆಗೊಳಿಸಲಿದ್ದಾರೆ. ಉಡುಪಿ ಖ್ಯಾತ ವಾಗ್ಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಗುರು ಶಿಷ್ಯ ಪರಂಪರೆಯ ಕುರಿತಂತೆ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಉದ್ಯಮಿ ಶ್ರೀಪತಿ ಭಟ್, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ., ಮಂಗಳೂರು ಗುಪ್ತಚರ ಇಲಾಖೆಯ ಅಧಿಕಾರಿ ಗೋಪಾಲಕೃಷ್ಣ ಕುಂದರ್, ಪುರಸಭಾ ಸದಸ್ಯ ಪುರಂದರ ದೇವಾಡಿಗ, ಸಮಾಜ ಸೇವಕ ಸುಗಂಧಿ ಹರೀಶ್ ಅಮೀನ್ ಪಾಲ್ಗೊಳ್ಳಲಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಾದ ಗೋಪಾಲಕೃಷ್ಣ ಕುಂದರ್(ಸಮಾಜ ಸೇವೆ), ಡಾ. ಗುರುಪ್ರಸಾದ್ ಮಣಿಪಾಲ (ಶೈಕ್ಷಣಿಕ ಕ್ಷೇತ್ರ), ಡಾ. ವೈಷ್ಣವಿ ರವಿ (ಸಂಗೀತ ಕ್ಷೇತ್ರ), ರಾಮ ಅಜೆಕಾರ್ (ಮಾಧ್ಯಮ ಕ್ಷೇತ್ರ), ಮೌಲ್ಯ ವೈ. ಜೈನ್ (ವಿಜ್ಞಾನ ಕ್ಷೇತ್ರ) ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಶ್ರೇಷ್ಠ ಗೀತ ರಚನಾಪ್ರಶಸ್ತಿ ಪುರಸ್ಕೃತ ರಝಾಕ್ ಪುತ್ತೂರು ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಾರವ ಕಲಾ ಸಂಗೀತೋತ್ಸವದ ಕಾರ್ಯದರ್ಶಿ ನವೀನ್ ಕೋಟ್ಯಾನ್ ಹಾಗೂ ಕೋಶಾಧಿಕಾರಿ ದಿನೇಶ್ ಅಶ್ವಥಪುರ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.