
ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ದಿನಾಂಕ ನಿಗದಿ
Sunday, February 23, 2025
ಮೂಡುಬಿದಿರೆ: ಕೊನ್ನಾರ ಮಾಗಣೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಇದರ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ ದಿನಾಂಕ ಪ್ರಕಟಿಸಲಾಯಿತು.
ಏಪ್ರಿಲ್ 23 ರಿಂದ ಆರಂಭವಾಗುವ ಬ್ರಹ್ಮಕಲಶ ಉತ್ಸವದ ಕಾರ್ಯಕ್ರಮ, ವಾರ್ಷಿಕ ಜಾತ್ರೋತ್ಸವ ಸೇರಿದಂತೆ ಮೇ 7ರವರೆಗೆ ನಡೆಯಲಿದೆ. ಮಾರ್ಚ್ 12ರಂದು ನಾಗ ಪ್ರತಿಷ್ಠೆ ನಡೆಯಲಿದ್ದು ಮಾರ್ಚ್ 16 ರಂದು ಧ್ವಜ ಸ್ತಂಭ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 23ರಿಂದ ಧಾರ್ಮಿಕ ಕೈಂಕರ್ಯಗಳು ಆರಂಭವಾಗಲಿದ್ದು ಏಪ್ರಿಲ್ 30 ರಂದು ಶ್ರೀ ಸೋಮನಾಥ ದೇವರು, ಅಗ್ನಿ ಗಣಪತಿ ಹಾಗೂ ಮಹಿಷ ಮರ್ಧಿನಿ ದೇವಿಯ ಪ್ರತಿಷ್ಠಾಪನೆ ನಡೆಯಲಿದ್ದು ಮೇ 2ರಂದು ಬ್ರಹ್ಮ ಕಲಶೋತ್ಸವ ನಡೆಯಲಿದೆ ಎಂದು ಪ್ರಕಟಿಸಲಾಯಿತು.
ಸಭೆಯಲ್ಲಿ ಪಣಪಿಲ ಅರಮನೆಯ ಮುಖ್ಯಸ್ಥರಾದ ವಿಮಲ್ ಕುಮಾರ್ ಶೆಟ್ಟಿ, ತಂತ್ರಿಗಳಾದ ನರಸಿಂಹ ತಂತ್ರಿ, ರಾಘವೇಂದ್ರ ಭಟ್, ಅಸ್ರಣ್ಣರಾದ ನಾಗರಾಜ್ ಭಟ್, ಹಿರಿಯರಾದ ಕೆಲ್ಲಪುತ್ತಿಗೆ ಪರಾರಿ ಕೆಪಿ ಜಗದೀಶ್ ಅಧಿಕಾರಿ, ಪಂಚದುರ್ಗಾ ಪಡುಕೊಣಾಜೆ ತಿಮ್ಮಯ್ಯ ಶೆಟ್ಟಿ, ಪಣಪಿಲ, ಅಳಿಯೂರು ಗರಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಭಟ್, ಪಣಪಿಲ ಅರಮನೆಯ ಭರತ್ ಜೈನ್, ಸುದೀಶ್ ಆನಡ್ಕ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಸುಕೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಅರಿಗ, ಕಾರ್ಯದರ್ಶಿ ವಿಶ್ವನಾಥ್ ಕೋಟ್ಯಾನ್ ಹನ್ನೇರು ಸೇರಿದಂತೆ ಇತರರು ಉಪಸ್ಥಿತರಿದ್ದರು.