ನಾಳೆ ಮೂಡುಬಿದಿರೆಯಲ್ಲಿ ಸಂಚಾರ ನಿಯಮ ಬದಲಾವಣೆ

ನಾಳೆ ಮೂಡುಬಿದಿರೆಯಲ್ಲಿ ಸಂಚಾರ ನಿಯಮ ಬದಲಾವಣೆ


ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ ಇದರ  ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.28 ರಿಂದ ಮಾ.7 ರವರೆಗೆ ನಡೆಯಲಿರುತ್ತದೆ. 

ಆ ಪ್ರಯುಕ್ತ ಫೆ.28 ರಂದು ಮಧ್ಯಾಹ್ನ 2 ಗಂಟೆಗೆ ಮೂಡುಬಿದಿರೆ ಪೇಟೆಯಿಂದ ಹಸಿರು ಹೊರೆ ಕಾಣಿಕೆ ನಡೆಯಲಿದ್ದು, ಹಸಿರು ಹೊರ ಕಾಣಿಕೆಯ ಮೂಡುಬಿದಿರೆ ಮುಖ್ಯ ಪೇಟೆಯಿಂದ ಹೊರಡುವುದರಿಂದ ಸಾವಿರಾರು  ಭಕ್ತಾದಿಗಳು ಹಾಗೂ ಹೊರೆ ಕಾಣಿಕೆ ಹೊತ್ತ ಹೆಚ್ಚಿನ ವಾಹನಗಳು ಸೇರುವ ನಿರೀಕ್ಷೆ ಇರುತ್ತದೆ. ಆದುದರಿಂದ ಮಧ್ಯಾಹ್ನ 2 ಗಂಟೆಯ ನಂತರ ಮೂಡಬಿದರೆ ಪೇಟೆಯಲ್ಲಿನ ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆಗಳನ್ನು  ಮಾಡಲಾಗಿದ್ದು,  ಸಾರ್ವಜನಿಕರು  ಮೂಡುಬಿದಿರೆಯ ನಗರಕ್ಕೆ  ಬಾರದೇ  ಮೂಡುಬಿದಿರೆಯ ಹೊರ ವರ್ತುಲಾ (ಬೈಪಾಸ್) ರಸ್ತೆಯಲ್ಲಿ ಹಾಗೂ ವಿದ್ಯಾಗಿರಿ- ಮಾಸ್ತಿಕಟ್ಟೆ–ಬೊಗ್ರುಗುಡ್ಡೆ–ಪೇಪರ್ ಮೀಲ್ ಒಳ ರಸ್ತೆಯಿಂದಾಗಿ ಹಸಿರು ಹೊರೆ ಕಾಣಿಕೆ ಮುಗಿಯುವ ವರೆಗೂ ಸಂಚರಿಸಿ  ಸಹಕರಿಸಬೇಕಾಗಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article