ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ದೇಶದಲ್ಲೇ ರಾಜ್ಯ ಮುಂಚೂಣಿಯಲ್ಲಿ: ಭರತ್ ಮುಂಡಾಡಿ

ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ದೇಶದಲ್ಲೇ ರಾಜ್ಯ ಮುಂಚೂಣಿಯಲ್ಲಿ: ಭರತ್ ಮುಂಡಾಡಿ


ಮೂಡುಬಿದಿರೆ: ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕನಾ೯ಟಕ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ.ಆದರೂ ವಿರೋಧ ಪಕ್ಷದವರು ಅಭಿವೃದ್ಧಿಗೆ ಹಣವಿಲ್ಲ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತಿದೆ ಎಂದು ಟೀಕೆ ಮಾಡುತ್ತಿದ್ದಾರೆ. ದಯವಿಟ್ಟು ನೀವು ಟೀಕೆ ಮಾಡುವ ಬದಲು ಈ ಯೋಜನೆಗಳನ್ನು ಕೊಡಬೇಡಿ ಎಂದು ಹೇಳುವ ಧೈರ್ಯವನ್ನು ತೋರಿಸಿ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡಾಡಿ ಸವಾಲು ಹಾಕಿದರು.


ಅವರು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಮೂಡುಬಿದಿರೆ  ತಾಲೂಕು ಇದರ ವತಿಯಿಂದ ಮಂಗಳವಾರ ಸಮಾಜ ಮಂದಿರದಲ್ಲಿ ನಡೆದ ನೋಂದಾವಣೆಗೆ ಬಾಕಿ ಇರುವ ಮತ್ತು ತಿರಸ್ಕೃತ ಅಜಿ೯ಗಳ ತಾಲೂಕು ಮಟ್ಟದ ವಿಲೇವಾರಿ ಶಿಬಿರ ಹಾಗೂ ಯುವನಿಧಿ ವಿಶೇಷ ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.


ಕನಾ೯ಟಕ ರಾಜ್ಯದ ಒಟ್ಟು ಬಜೆಟ್ 3,078,000 ಕೋ.ಇದ್ದು ಅದರಲ್ಲಿ 56,000 ಕೋ. ರೂವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಲಾಗಿದೆ.ಉಳಿದ 3,012,000 ಕೋ. ರೂವನ್ನು ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ. ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ ಮೇಲೆ ಇತ್ತೀಚಿನ ಸಮೀಕ್ಷೆ ಪ್ರಕಾರ ಇಡೀ ದೇಶದಲ್ಲೇ ಕನಾ೯ಟಕ ರಾಜ್ಯವು ಅತ್ಯಂತ ಹೆಚ್ಚಿನ ಜಿಡಿಪಿಯನ್ನು ಹೊಂದಿರುವ ರಾಜ್ಯವಾಗಿದೆ ಎಂದ ಅವರು ಪಂಚ ಗ್ಯಾರಂಟಿ ಬಗ್ಗೆ ಟೀಕೆ ಮಾಡುವ ನಿಮಗೆ ಮುಂದಿನ ದಿನಗಳಲ್ಲಿ ಅದರ ಫಲಾನುಭವಿಗಳೇ ಸರಿಯಾದ ಪಾಠವನ್ನು ಕಲಿಸುತ್ತಾರೆಂದರು.


ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಕನಾ೯ಟಕ. ಈ ಯೋಜನೆಗಳು ಶ್ರೀಮಂತರಿಗೆ, ಸರಕಾರಿ ಉದ್ಯೋಗಿಗಳಿಗಲ್ಲ ಬದಲಾಗಿ ಬಡವರಿಗಾಗಿ ಆದ್ದರಿಂದ ತಾವು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.


ಗ್ಯಾರಂಟಿ ಅನುಷ್ಠಾನ ಸಮಿತಿಯ ಮುಲ್ಕಿ ತಾಲೂಕು ಅಧ್ಯಕ್ಷ ಆಲ್ವೀನ್ ಡಿಕ್ಹುನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ಶುಭ, ಆರ್ ಟಿ ಓ ಇಲಾಖೆಯ ನಿಮ೯ಲ, ಮೆಸ್ಕಾಂ ಇಲಾಖೆಯ ಬುಶ್ರಾ, ಗ್ಯಾರಂಟಿ ಯೋಜನೆಯ ಮೂಡುಬಿದಿರೆ ತಾಲೂಕಿನ ಸದಸ್ಯರಾದ ಸುಕೇಶ್ ಶೆಟ್ಟಿ, ರೆಕ್ಸಾನ್ ಪಿಂಟೋ, ಶಕುಂತಳಾ ದೇವಾಡಿಗ, ಗಣೇಶ್ ಆಚಾಯ೯, ರಜನಿ, ಸೌಕತ್, ಪ್ರಭಾಕರ ಮತ್ತು ಜಯರಾಮ್ ಇರುವೈಲ್ ಉಪಸ್ಥಿತರಿದ್ದರು.


ಗ್ಯಾರಂಟಿ ಯೋಜನೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ  ಪ್ರಾಸ್ತವಿಕವಾಗಿ ಮಾತನಾಡಿ ತಾಲೂಕಿನಲ್ಲಿ 19000 ಗೃಹಲಕ್ಷ್ಮೀ ಮತ್ತು 28000 ಫಲಾನುಭವಿಗಳು ಗೃಹಜ್ಯೋತಿಯಲ್ಲಿದ್ದಾರೆ. ಇಲ್ಲಿ ಗ್ಯಾರಂಟಿ ಯೋಜನೆಗಳು ನಿರೀಕ್ಷೆಗೂ ಮೀರಿ ಯಶಸ್ವೀಯಾಗಿದೆ ಮತ್ತು ಜನರು ಆಥಿ೯ಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದ್ದಾರೆಂದರು.


ತಾಲೂಕು ಪಂಚಾಯತ್ ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ ಸ್ವಾಗತಿಸಿದರು. ಶಿವಾನಂದ ಪಾಂಡ್ರು ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article