
ಇರುವೈಲು ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ ಸುಜಾತ ಜೆ. ಶೆಟ್ಟಿ ಆಯ್ಕೆ
Thursday, February 20, 2025
ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸುಜಾತ ಜೆ.ಶೆಟ್ಟಿ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕ ಐ. ರಾಘವೇಂದ್ರ ಭಟ್ ಇರುವೈಲ್, ಶಿವಾನಂದ ನಾಯ್ಕ್, ದೀಪಾ, ಪ್ರದೀಪ್ ಶೆಟ್ಟಿ, ಪೂವಪ್ಪ ಸಾಲ್ಯಾನ್, ಶುಭಕರ ಕಾಜವ, ಪದ್ಮನಾಭ ಪೂಜಾರಿ ಮತ್ತು ಮೋಹನ್ ನಾಯಕ್ ಅವರು ಆಯ್ಕೆಯಾಗಿದ್ದಾರೆ.