.jpeg)
ಭ್ರಷ್ಟಾಚಾರ ಮಾಡಿದರೆ ‘ಚಪ್ಪಲಿ’ ಏಟು..!: ಭ್ರಷ್ಟ ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಖಡಕ್ ಎಚ್ಚರಿಕೆ
Sunday, February 2, 2025
ಪುತ್ತೂರು: ಕಂದಾಯ ಇಲಾಖೆಯ ಬಗರುಹುಕುಂ ಮೊಬೈಲ್ ಆಪ್‌ಗೆ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬ ಸರ್ಕಾರದ ಈ ಆಪ್ ವಿರುದ್ಧ ಧಿಕ್ಕಾರ ಕೂಗಿರುವುದು ಸಾಬೀತಾದರೆ ಆತನನ್ನು ತಕ್ಷಣದಿಂದ ಅಮಾನತು ಮಾಡಲಾಗುವುದು. ಯಾವುದೇ ಸರ್ಕಾರಿ ಅಧಿಕಾರಿಗಳು ಶಾಸಕರಿಗೆ ಪಾಲು ಕೊಡಲಿದೆ ಎಂದು ಜನರಿಂದ ನನ್ನ ಹೆಸರಲ್ಲಿ ಹಣ ಸಂಗ್ರಹ ಮಾಡಿದರೆ ಅಂತಹ ಅಧಿಕಾರಿಗಳಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಶಾಸಕ ಅಶೋಕ್ ರೈ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಕೆಲಸಗಳಿಗೆ ಯಾವ ಅಧಿಕಾರಿಗಳಿಗೂ ಯಾರೂ ದುಡ್ಡು ಕೊಡಬೇಡಿ. ಸ್ವಲ್ಪ ತಡವಾದರೂ ದುಡ್ಡು ಕೊಡದೆ ನಿಮ್ಮ ಕೆಲಸ ಆಗುತ್ತದೆ. ಅಧಿಕಾರಿಗಳಿಗೆ ದುಡ್ಡು ಕೊಟ್ಟವರು ಯಾರೂ ನನ್ನಲ್ಲಿ ಹೇಳುತ್ತಿಲ್ಲ. ದುಡ್ಡು ಕೊಟ್ಟವರು ನನ್ನ ಹತ್ತಿರ ಬಂದು ಹೇಳಿದರೆ ಅಂತಹ ಅಧಿಕಾರಿಯಿಂದಲೇ ಹಣ ವಾಪಾಸು ತೆಗೆಸಿಕೊಡುತ್ತೇನೆ ಎಂದು ಅವರು ಸಾರ್ವಜನಿಕರಿಗೆ ವಿನಂತಿ ಮಾಡಿದರು.
ಸಿಮೆಂಟ್ ಗೋಣಿ ಪ್ರಕರಣ..:
ಬಿಜೆಪಿಗರು ಪುತ್ತೂರು ತಾಲೂಕಿನಲ್ಲಿ ಒಂದು ಗೋಣಿ ಸಿಮೆಂಟ್ ಕಾಮಗಾರಿಯೂ ಆಗಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಉತ್ತರ ಕೊಡುವ ಸಂದರ್ಭ ಕೋಟಿ ಸಿಮೆಂಟ್ ಗೋಣಿ ಕೆಲಸ ಆರಂಭವಾಗಿದೆ ಎಂದು ಉತ್ತರಿಸಿದ್ದೇನೆ. ಜನರೇ ಹಿಂದಿನ ಅಭಿವೃದ್ದಿ ಮತ್ತು ಈಗಿನ ಅಭಿವೃದ್ಧಿ ಬಗ್ಗೆ ತುಲನೆ ಮಾಡಿ ಉತ್ತರ ಕೊಡುತ್ತಾರೆ. ಬದಲಾವಣೆಯನ್ನು ಜನರೇ ನೋಡಿ ನಿರ್ಧಾರ ಮಾಡುತ್ತಾರೆ. ನಾವು ಅಭಿವೃದ್ಧಿ ಮಾಡದಿದ್ದರೆ ಓಟು ಹಾಕಬೇಡಿ. ತಪ್ಪು ಮಾಡಿದರೆ ತಿದ್ದಿ. ಒಟ್ಟು ಸೇರಿ ಅಭಿವೃದ್ಧಿ ಕೆಲಸ ಮಾಡೋಣ. ಇದರಲ್ಲಿ ರಾಜಕೀಯ ಬೆರೆಸುವ ಕೆಲಸ ಬೇಡ ಎಂದಿದ್ದಾರೆ.