ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕಿ ಗೀತಾ ಪೂರ್ಣಿಮಾಗೆ ಡಾಕ್ಟರೇಟ್ ಪದವಿ

ಸಂತ ಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕಿ ಗೀತಾ ಪೂರ್ಣಿಮಾಗೆ ಡಾಕ್ಟರೇಟ್ ಪದವಿ


ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳ ಸಹಾಯಕ ಪ್ರಾಧ್ಯಾಪಕಿ ಗೀತಾ ಪೂರ್ಣಿಮಾ ಕೆ. ಅವರ ‘ಅಡ್ವಾನ್ಸ್ಮೆಂಟ್ ಇನ್ ಅಕ್ವಾಟಿಕ್ ಅಥ್ಲಿಟ್ ಅನಾಲಿಟಿಕ್ಸ್: ಎ ನೋವೆಲ್ ಅಪ್ರೋಚ್ ಟು ಸ್ವಿಮ್ಮರ್ ಫಿಟ್ನೆಸ್ ಪ್ರೆಡಿಕ್ಷನ್ ಯುಸಿಂಗ್ ಮಾಡಿಫೈಡ್ ರೆಸಿಲಿಯೆಂಟ್ ಪಾರ್ಟಿಕಲ್ ಸ್ವಾರ್ಮ್ ಆಪ್ಟಿಮೈಝೇಶನ್ ಅಲ್ಗಾರಿಥಮ್’ ಎಂಬ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. 

ಅವರಿಗೆ ಶ್ರೀನಿವಾಸ ವಿಶ್ವವಿದ್ಯಾನಿಲಯದ ಡಾ. ಸುರೇಶ ಡಿ. ಮತ್ತು ಮಂಗಳೂರಿನ ಎಜೆ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಡಾ. ಕೃಷ್ಣ ಪ್ರಸಾದ್ ಕೆ. ಅವರುಗಳು ಮಾರ್ಗದರ್ಶನ ನೀಡಿರುತ್ತಾರೆ. 

ಸಂಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ಇಪ್ಪತ್ತಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು ಪೀರ್-ರಿವ್ಯೂಡ್ ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ, ಇದರಲ್ಲಿ 3 ಸ್ಕೋಪಸ್-ಇಂಡೆಕ್ಸ್ಡ್ ಪ್ರಕಟಣೆಗಳು ಸೇರಿವೆ. ಮಾತ್ರವಲ್ಲದೆ ಅವರು 4 ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ ಮತ್ತು ಸಂಪಾದಿಸಿದ ಪುಸ್ತಕಗಳಲ್ಲಿ 4 ಅಧ್ಯಾಯಗಳನ್ನು ಬರೆದಿದ್ದಾರೆ ಹಾಗೂ 2 ಪುಸ್ತಕಗಳ ಸಹಲೇಖಕಿಯಾಗಿರುತ್ತಾರೆ. 

ಇವರು ಒಂದು ಪೇಟೆಂಟ್‌ಗೆ ಅರ್ಜಿ ಸಲ್ಲಿಸಿರುತ್ತಾರೆ ಮಾತ್ರವಲ್ಲದೆ ಇವರ ಒಂದು ಸಂಶೋಧನಾ ಲೇಖನಕ್ಕೆ ಕಾಪಿರೈಟ್ ಲಭಿಸಿರುತ್ತದೆ. ತಮ್ಮ ಅಧ್ಯಯನದ ಸಂದರ್ಭದಲ್ಲಿ ಅವರು ಶ್ರೀನಿವಾಸ ವಿಶ್ವವಿದ್ಯಾನಿಲಯದ ಐಇಇಇ (IEEE) ವಿದ್ಯಾರ್ಥಿ ಶಾಖೆಯ ಕಾರ್ಯದರ್ಶಿಯಾಗಿ ಸಂಶೋಧನೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸಹಕಾರ ನೀಡಿರುತ್ತಾರೆ. 

ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ, ಅವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು 2023ರಲ್ಲಿ ಬೆಸ್ಟ್ ರೀಸರ್ಚ್ ಸ್ಕಾಲರ್ ಪ್ರಶಸ್ತಿಯನ್ನು ನೀಡಿದೆ. ಅವರು 2020ರಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯದ ಐಇಇಇ ವಿದ್ಯಾರ್ಥಿ ಶಾಖೆಯು ಪಿಎಚ್‌ಡಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪೇಪರ್ ಪ್ರೆಸೆಂಟೇಶನ್  ಸ್ಪರ್ಧೆಯಲ್ಲಿ ‘ಅತ್ಯುತ್ತಮ ಪೇಪರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಈ ಸಾಧನೆಗೆ ಇವರು ತಮ್ಮ ಮಾರ್ಗದರ್ಶಕರಾದ ಡಾ. ಸುರೇಶ ಎಸ್. ಮತ್ತು ಡಾ. ಕೃಷ್ಣ ಪ್ರಸಾದ್ ಕೆ ಅವರಿಗೆ, ಶೈಕ್ಷಣಿಕ ಪ್ರಯಾಣದುದ್ದಕ್ಕೂ ತನ್ನೊಂದಿಗೆ ನಿಂತಿದ್ದ  ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಕುಟುಂಬದ ಸದಸ್ಯರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article