
ಫೆ.17 ರಂದು ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾರಿಕಾಂಬ ದೇವಿಯ ನೂತನ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ
Friday, February 14, 2025
ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾರಿಕಾಂಬ ದೇವಿಯ ನೂತನ ದೇವಸ್ಥಾನ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರಮವು ಫೆ. 15 ರಿಂದ ಆರಂಭಗೊಂಡು ಫೆ.17 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ.
ಫೆ.15 ರಂದು ಬೆಳಿಗ್ಗೆ 8 ಗಂಟೆಗೆ ಗಂಗಾಪೂಜೆ, ಪ್ರಾರ್ಥನೆ, ಗುರುವಂದನೆ, ಗಣಪತಿ ಪೂಜೆ, ಪುಣ್ಯಾಹ, ಗಣಹೋಮ. ಸಂಜೆ ವಾಸ್ತು ಹೋಮ, ಶ್ರೀ ದುರ್ಗಾದೇವಿ ಮತ್ತು ಶ್ರೀ ಮಾರಿಕಾಂಬ ಪರಿವಾರ ಸಹಿತ ಕಳಶ ಸ್ಥಾಪನೆ, ರಾಕ್ಷೋಘ್ನ ಬಲಿ, ಮಹಾ ಪೂಜೆ ನಡೆಯಲಿದೆ.
ಫೆ.16 ರಂದು ಬೆಳಿಗ್ಗೆ ಕಳಸ ಮರ್ಜನೆ, ಅಗ್ನಿ ಪ್ರತಿಷ್ಠೆ, ನವಗ್ರಹ ಹವನ, ಶ್ರೀಸೂಕ್ತ ಹವನ, ದೇವಿ ಸೂಕ್ತ ಹವನ. ಸಂಜೆ ಅಷ್ಟವದಾನ ಪೂಜೆ, ಬಲಿದಾನ, ಸಪ್ತಶತಿ ಪಾರಾಯಣ, ಮಹಾ ಪೂಜೆ ನಡೆಯಲಿದೆ.
ಹಾಗೂ ಸಂಜೆ 4 ಗಂಟೆಗೆ ಸಕಲ ಮಂಗಳವಾಧ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಪಲ್ಲಕ್ಕಿ ಉತ್ಸವದ ಮೆರವಣಿಗೆ ಹೊರಟು ರಾತ್ರಿ ಅಮ್ಮನವರ ಗುಡಿ ಪ್ರವೇಶ ನಡೆಯಲಿದೆ.
ಫೆ.17 ರಂದು ಬೆಳಿಗ್ಗೆ 6.30 ರ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ, ಕಲಾಭಿವೃದ್ದಿ ಹೋಮ, ನವಚಂಡಿ ಹವನ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 1 ಗಂಟೆಗೆ ಮಹಾ ಪೂಜೆ,. ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.