
ನಂದಳಿಕೆ ಶರಣ್ಯಾ ತಂತ್ರಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ
Thursday, February 20, 2025
ಶಿರ್ವ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಕಲೆ, ಸಾಂಸ್ಕೃತಿಕ ಮತ್ತು ಸಂಗೀತಾ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳಿಗಾಗಿ ಕೊಡಲ್ಪಡುವ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ನಂದಳಿಕೆ ಶರಣ್ಯ ತಂತ್ರಿ ಇವರು ಪಡೆದುಕೊಂಡಿದ್ದಾರೆ.
ಇವರು 2024-25ನೇ ಸಾಲಿನ ದ್ವಿತೀಯ ಪಿಯು ಸಂಗೀತಾ, ಚಿತ್ರಕಲೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ನೀಡಲ್ಪಡುವ ಬಾಲ ಜ್ಞಾನಶ್ರೀ ಪುರಸ್ಕಾರ, ಕಾಲೇಜು ಮಟ್ಟದ ಸೀನಿಯರ್ ವಿಭಾಗದ ಚಿತ್ರಕಲಾ ಪರೀಕ್ಷೆಯಲ್ಲಿ ಕಾಪು ವಲಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದು, ಗಣೇಶ್ ಆಚಾರ್ಯ ಶಿರ್ವ ಇವರಿಂದ ಚಿತ್ರಕಲಾ ತರಬೇತಿಯನ್ನು ಪಡೆಯುತ್ತಿದ್ದು, ಸಂಗೀತ ತರಬೇತಿಯನ್ನು ವಿದುಷಿ ಲತಾ ತಂತ್ರಿ ಕುತ್ಯಾರು ಇವರಿಂದ ಪಡೆಯುತ್ತಿದ್ದಾರೆ.
ಪ್ರಸ್ತುತ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್ಸಿಟ್ಯೂಟ್ ಆಫ್ ಟೆಕ್ನಲಜಿ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇವರು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರೀಶ್ ತಂತ್ರಿ ದಂಪತಿಗಳ ಪುತ್ರಿ.