
ಉಡುಪಿ ಜಿಲ್ಲಾ ನೂತನ ಎಡಿಸಿ ಅಬೀದ ಗದ್ಯಾಳ
Saturday, February 15, 2025
ಉಡುಪಿ: ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಅಬೀದ ಗದ್ಯಾಳ ಅವರನ್ನು ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಗೆ ಸರಕಾರ ವರ್ಗಾಯಿಸಿದೆ.
ಈ ಹಿಂದೆ ಎಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಮತಾದೇವಿ ಬೆಂಗಳೂರಿಗೆ ವರ್ಗವಾಗಿದ್ದು, ಅವರಿಂದ ತೆರವಾದ ಹುದ್ದೆಗೆ ಅಬೀದ ನೇಮಕಗೊಂಡಿದ್ದಾರೆ.