
ಅದ್ಭುತ ಸ್ಮರಣ ಶಕ್ತಿಯ ವಿಶ್ವ ದಾಖಲೆ ಬರೆದ ಬಾಲಪ್ರತಿಭೆ: ಸ್ಪೃಹಾ ಎಸ್. ಬಾಡ
ಉಜಿರೆ: 2 ವರ್ಷ 4 ತಿಂಗಳ ಬಾಲಕಿಯೊಬ್ಬಳು ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಅದ್ವಿತೀಯ ಸಾಧನೆಗೈದು ವಿಶ್ವ ದಾಖಲೆ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರತಿಷ್ಠಿತ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಸ್ಪೃಹಾ ಎಸ್. ಬಾಡ ತಡೆಯಿಲ್ಲದೆ ನಿರರ್ಗಳವಾಗಿ 150 ಜಿಲ್ಲೆಗಳ ಹೆಸರು, 30 ಪ್ರಾಣಿಗಳ ಹೆಸರು, 10 ಹಣ್ಣುಗಳ ಹೆಸರು, 20 ತರಕಾರಿಗಳ ಹೆಸರು, 10 ಪಕ್ಷಿಗಳ ಹೆಸರು, 25 ವಾಹನಗಳ ಹೆಸರು, ಮತ್ತು 30ಕ್ಕೂ ಅಧಿಕ ವಸ್ತು ವೈವಿಧ್ಯಗಳ ಹೆಸರು, 20ಕ್ಕೂ ಅಧಿಕ ಆಹಾರ ಪದಾರ್ಥಗಳು, ದೇಹದ 10 ಭಾಗಗಳು, 20ಕ್ಕೂ ಅಧಿಕ ಕುಟುಂಬಸ್ಥರು ಹಾಗೂ 10ಕ್ಕೂ ಅಧಿಕ ಗೆಳೆಯರ ಹೆಸರನ್ನು ತಡೆಯಿಲ್ಲದೆ ಹೇಳಬಲ್ಲ ಅಪೂರ್ವ ಬಾಲ ಪ್ರತಿಭೆ.
ಸ್ಪೃಹಾ ಎಳೆಯ ಪ್ರಾಯದಲ್ಲೇ 1 ರಿಂದ 15 ಇಂಗ್ಲಿಷ್ ಹಾಗೂ 1 ರಿಂದ 10 ಕನ್ನಡ ಅಂಕೆಗಳನ್ನು ಗುರುತಿಸಬಲ್ಲಳು ಹಾಗೂ ಎ ಇಂದ ಮೊದಲ್ಗೊಂಡು ಝೆಡ್ ವರೆಗೆ ಆಂಗ್ಲ ಪದ ಹಾಗೂ ಎ ಅಂದರೆ ಆಪಲ್ ಎಂದು ವಿಶ್ಲೇಷಿಸಿ ಯಾವುದೇ ಅಳುಕಿಲ್ಲದೆ ಹೇಳಬಲ್ಲಳು. ವಾರದ 7 ದಿನಗಳು, ಮತ್ತು ಕನ್ನಡ ಹಾಗೂ ಇಂಗ್ಲಿಷ್‌ನ ಸಂಬಂಧಗಳನ್ನು ಉತ್ತರಿಸಬಲ್ಲಳು. 2024 ನವೆಂಬರ್ 24ರಂದು ತನ್ನ ಅದ್ಭುತ ಸ್ಮರಣ ಶಕ್ತಿಯನ್ನು ಪ್ರದರ್ಶಿಸಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ದಾಖಲಿಸಲ್ಪಟ್ಟು ಪ್ರಶಸ್ತಿ ಪುರಸ್ಕೃತಳಾಗಿದ್ದಾಳೆ.
ಸ್ಪೃಹಾ ಎಸ್. ಬಾಡ ಅವಳು ಉಜಿರೆ ಗ್ರಾಮದ ಮಾಚಾರಿನ ಅಶೋಕ ರಾಜ್ ಬಾರಿತ್ತಾಯರ ಮೊಮ್ಮಗಳು ಹಾಗೂ ಪದ್ಮ ಮತ್ತು ಸಂಜಯ್ ದಂಪತಿ ಪುತ್ರಿ.