
ಉಜಿರೆಯ ಡಾ. ಮಾನಸ ಜಿ. ಶೆಟ್ಟಿ ಅವರಿಗೆ ಪಿಎಚ್‌ಡಿ ಪದವಿ
Wednesday, February 12, 2025
ಉಜಿರೆ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನ ಬಯೋಫಿಸಿಕ್ಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಡಾ. ಮಾನಸ ಜಿ. ಶೆಟ್ಟಿ ಅವರು `2.2'-ಬಿಪೈರಿಡಿನ್/1,10-ಫೈನ್ಯಾನ್ಥ್ರೊಲೈನ್ ಹೈಡ್ರೋಕ್ಸಾಮಿಕ್ ಆಮ್ಲ ಸಂಬಂಧಿತ ರಚನೆ, ಸಂಶ್ಲೇಷಣೆ ಮತ್ತು ಕ್ಯಾನ್ಸರ್ ವಿರೋಧಿ ಪರಿಣಾಮಗಳ ಮೌಲ್ಯಮಾಪನ' ವಿಷಯದ ಕುರಿತು ಸಂಶೋಧನೆ ನಡೆಸಿ, ಪಿಎಚ್‌ಡಿ ಪಡೆದಿದ್ದಾರೆ.
ಬಯೋಫಿಸಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಬಬಿತಾ ಕೆ.ಎಸ್. ಸಂಶೋಧನೆಗೆ ಮಾರ್ಗದರ್ಶಕರಾಗಿ ಸಹಕರಿಸಿದ್ದರು.