
ಬೆಳ್ತಂಗಡಿ ತಾ. ಪತ್ರಕರ್ತರ ಸಂಘಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೌರವ
Wednesday, February 12, 2025
ಉಜಿರೆ: ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ಉಜಿರೆ ಎಸ್‌ಡಿಎಂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್, ಬೆಳಾಲು ಅನಂತೋಡಿ ಶ್ರಿ ಅನಂತಪದ್ಮನಾಭ ದೇವಸ್ಥಾನದ ಸಹಯೋಗದೊಂದಿಗೆ ದೇವಸ್ಥಾನದ ಬಳಿ ಹಡೀಲು ಬಿದ್ದ 4.30 ಎಕರೆ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯಕ್ರಮ ನಡೆದಿದ್ದು ಅದಕ್ಕೆ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಸಹಯೋಗ ನೀಡಿತ್ತು. ಅಲ್ಲಿ 735 ಮಂದಿಯಿಂದ ಏಕಕಾಲದಲ್ಲಿ 4.30 ಎಕರೆ ಗದ್ದೆ ಭತ್ತ ನಾಟಿ ಮಾಡಲಾಗಿತ್ತು. ಇದಕ್ಕೆ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ.
ಈ ಗೌರವವನ್ನು ಫೆ 9ರಂದು ಅಲ್ಲಿ ನಡೆದ ಭತ್ತ ಕಟಾವು ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಸೋನಿಯಾ ಯಶೋವರ್ಮ, ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ರೋಟರಿ ಕ್ಲಬ್ ಸದಸ್ಯ ಶ್ರಿಧರ ಕೆ.ವಿ., ಪತ್ರಕರ್ತರ ಸಂಘದ ಅದ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ಯವರಿಗೆ ಹಸ್ತಾಂತರಿಸಿದರು.
ಸಂಘದ ಕಾರ್ಯದರ್ಶಿ ತುಕಾರಾಮ್, ಕೋಶಾದಿಕಾರಿ ಜಾರಪ್ಪ ಪುಜಾರಿ, ಮಾಜಿ ಅಧ್ಯಕ್ಷರುಗಳಾದ ಚೈತ್ರೇಶ್ ಇಳಂತಿಲ, ಅರ್.ಎನ್. ಪೂವಣಿ, ಮನೋಹರ್ ಬಳಂಜ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಕಳೆದ 16 ವರ್ಷಗಳಿಂದ ವಿವಿಧ ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.