
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಡಿ.ಡಿ. ಹಸ್ತಾಂತರ
Thursday, February 20, 2025
ಉಜಿರೆ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಮಹಿಷಮರ್ದಿನಿ ಅಮ್ಮನವರ ಸನ್ನಿಧಿಯ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಿ. ವೀರೇಂದ್ರ ಹೆಗ್ಗಡೆ ಅವರು ಹತ್ತು ಲಕ್ಷ ರೂ. ಮಂಜೂರು ಮಾಡಿದ್ದು, ಡಿ. ಹರ್ಷೇಂದ್ರ ಕುಮಾರ್ ಡಿ.ಡಿ.ಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಿ. ಶ್ರೀನಿವಾಸ ಉಪಾಧ್ಯಾಯರಿಗೆ ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಮುರಳೀಧರ ನಕ್ಷತ್ರಿ, ದಿನಕರ ಶೆಟ್ಟಿ, ಹೆರ್ಗ, ಸುಖಾಂತರ ಶೆಟ್ಟಿಗಾರ ಮತ್ತು ನಾಗೇಶ ಪ್ರಭು ಉಪಸ್ಥಿತರಿದ್ದರು.