
ಮಹಾಶಿವರಾತ್ರಿಯಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಚಲನಚಿತ್ರ ತಾರಾ ಬಳಗ
Wednesday, February 26, 2025
ಉಜಿರೆ: ಖ್ಯಾತ ಚಲನಚಿತ್ರ ತಾರೆ ಶೃತಿ ಮತ್ತು ಕುಟುಂಬದವರು, ಸುರಪುರದ ಶಾಸಕ ರಾಜು ಗೌಡ ಮತ್ತು ಕುಟುಂಬದವರು, ಖ್ಯಾತ ಸಿನೆಮಾ ನಿರ್ದೆಶಕ ತರುಣ್ ಸುಧೀರ್ ದಂಪತಿಗಳು, ಡಿಮ್ಯಾಕ್ಸ್ ಕಂಪೆನಿ ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ ಮತ್ತು ಕುಟುಂಬದವರು ಇಂದು ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.