
ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ನಾಲ್ಕನೇ ದಿನಕ್ಕೆ
Thursday, February 13, 2025
ಉಳ್ಳಾಲ: ಮೂಲಭೂತ ಸೌಕರ್ಯ ಸಹಿತ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ರಾಜ್ಯ ವ್ಯಾಪಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನವಾದ ಗುರುವಾರ ಕೂಡ ಮುಂದುವರಿದಿದೆ.
ಗ್ರಾಮಕರಣಿಕರು ಲೇಖನಿ ಸ್ಥಗಿತಗೊಳಿಸಿ ಮೌನವಾಗಿ ಮುಷ್ಕರ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾ ಸಂಘದ ಅಧ್ಯಕ್ಷ ಉಮೇಶ್ ಕಾವಡಿ ಮತ್ತು ಪ್ರಧಾನ ಕಾರ್ಯದರ್ಶಿ ಯಾದ ಅನಿಲ್ ಕುಮಾರ್ ಪೂಜಾರಿ ಅವರು ಆಗಮಿಸಿ ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಸರಕಾರದಿಂದ ಸ್ಪಂದನೆ ಸಿಗುವವರೆಗೂ ಮುಷ್ಕರವನ್ನು ಮುಂದುವರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕು ಸಂಘದ ಅಧ್ಯಕ್ಷ ತೌಫೀಕ್, ಪ್ರಧಾನ ಕಾರ್ಯದರ್ಶಿ ನವ್ಯ, ಹಾಗೂ ಸದಸ್ಯರಾದ ನಿಂಗಪ್ಪ ಜೆ, ಸುರೇಶ್, ಅಮ್ಜದ್ ಖಾನ್, ರಶೀದಾ ಬಾನು, ಜಗದೀಶ್, ರೇಶ್ಮ, ರಾಘವೇಂದ್ರ, ಮನೋಹರ್, ಕಾವ್ಯ, ನಯನ, ಲಾವಣ್ಯ, ಅಕ್ಷಿತ, ಜಯವತಿ, ಅಕ್ಷತಾ, ಚೈತ್ರ ಮತ್ತಿತರರು ಉಪಸ್ಥಿತರಿದ್ದರು.