ಐದೂವರೆ ಕೋಟಿ ವೆಚ್ಚದಲ್ಲಿ ಕುತ್ತಾರ್-ಮುನ್ನೂರು ರಸ್ತೆ ಅಭಿವೃದ್ಧಿ: ಸ್ಪೀಕರ್ ಯು.ಟಿ. ಖಾದರ್

ಐದೂವರೆ ಕೋಟಿ ವೆಚ್ಚದಲ್ಲಿ ಕುತ್ತಾರ್-ಮುನ್ನೂರು ರಸ್ತೆ ಅಭಿವೃದ್ಧಿ: ಸ್ಪೀಕರ್ ಯು.ಟಿ. ಖಾದರ್


ಉಳ್ಳಾಲ: ಐದುವರೆ ಕೋಟಿ ವೆಚ್ಚದಲ್ಲಿ ಕುತ್ತಾರ್ ಅಜ್ಜನಕಟ್ಟೆ, ಮುನ್ನೂರು, ರಾಣಿಪುರ ರಸ್ತೆ ಅಗಲೀಕರಣ ಮಾಡಲಾಗುವುದು. ಇದನ್ನು ಮುಡಾದ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಅಗಲೀಕರಣ ವೇಳೆ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಅದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಅಜ್ಜನಕಟ್ಟೆ, ಮುನ್ನೂರು, ರಾಣಿಪುರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕುತ್ತಾರ್‌ನಲ್ಲಿ ನಡೆದ ಅಧಿಕಾರಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಮೊದಲು ರಸ್ತೆ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಬೇಕು. ಈ ಬಗ್ಗೆ ಪಂಚಾಯತ್ ಜೊತೆ ಚರ್ಚಿಸಿ ಸಮಗ್ರ ವರದಿ ಮಾಡಬೇಕು. ಈ ರಸ್ತೆಯ ಎರಡೂ ಬದಿಗಳಲ್ಲಿ ಎರಡೂವರೆ ಮೀಟರ್‌ನಂತೆ ಸಮಾನವಾಗಿ ಅಗಲೀಕರಣ ಆಗಬೇಕು ಎಂದು ಮುಡಾ ಅಧಿಕಾರಿಗೆ ಸೂಚನೆ ನೀಡಿದರು.

ಪಂಚಾಯತ್ ಪರವಾನಿಗೆ ನೀಡುವ ವೇಳೆ ಒಟ್ಟಾರೆ ನೀಡಿದರೆ ನಿಮ್ಮ ಮೇಲೆ ಕ್ರಮ ಆಗುತ್ತದೆ. ಬಹುಮಹಡಿ ಕಟ್ಟಡ ಕೆ ಬೇಕಾದರೂ ಪರವಾನಿಗೆ ನೀಡಿ. ಆದರೆ ಪರವಾನಿಗೆ ನೀಡುವ ಸಂದರ್ಭದಲ್ಲಿ ರಸ್ತೆಗೆ 20 ಫೀಟ್ ಜಾಗ ಬಿಟ್ಟಿರಬೇಕು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಪರವಾನಿಗೆ ನೀಡಬೇಕು ಎಂದು ಮುನ್ನೂರು ಪಿಡಿಒ ಶ್ರೀಕಾಂತ್ ಅವರಿಗೆ ಸೂಚನೆ ನೀಡಿದ ಅವರು, ನಿಮ್ಮದು ಮತ್ತು ಮುಡಾದವರ ಹಣೆಬರಹ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ನಿಮ್ಮ ದಾಖಲೆ ಪುಸ್ತಕದಲ್ಲಿ ಇರುವ ವರದಿ, ಪ್ರಾಯೋಗಿಕ ಚಟುವಟಿಕೆ ಬೇರೆ ಬೇರೆ ಇದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಈ ರೀತಿ ಮಾಡಲು ಹೋಗಬೇಡಿ.ಸರಿಯಾಗಿ ಕೆಲಸ ಮಾಡಿದ್ದರೆ ಈ ಊರು ಇಷ್ಟು ಗಲೀಜು ಆಗುತ್ತಿರಲಿಲ್ಲ. ಮುಡಾ ಪರವಾನಿಗೆ ಇಲ್ಲದೆ ಕುತ್ತಾರ್ ಶಾಲೆಯ ಚರಂಡಿ ದುರಸ್ತಿ ಮಾಡಿಸಿದ್ದು ಯಾಕೆ ಎಂದು ಮುನ್ನೂರು ಪಿಡಿಒ ಶ್ರೀಕಾಂತ್‌ರನ್ನು ತರಾಟೆಗೆ ತೆಗೆದುಕೊಂಡರು.

ಭೌವಿಷ್ಯದ ಕಾಲಘಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿ ಆಗಬೇಕು. ಕಾನೂನು ಪ್ರಕಾರ ಕೆಲಸ ಮಾಡಬೇಕು. ಮುಂದಿನ ಜನಾಂಗಕ್ಕೆ ಉಪಯುಕ್ತ ಆಗುವ ರೀತಿಯಲ್ಲಿ  ಕಾಮಗಾರಿ ಮಾಡಿ. ಅಂಗಡಿಗಳು ಸಾರ್ವಜನಿಕ ರಸ್ತೆಯಲ್ಲಿ ಇದೆ. ಅದನ್ನು ಪಿಡಬ್ಲ್ಯುಡಿಗೆ ತೆರವು ಮಾಡಲು ಅವಕಾಶ ಇದೆ. ಆದರೆ ಅವರು ಮಾಡಲಿಲ್ಲ. ರಸ್ತೆ ಸಮೀಪ ಯಾವುದೇ ಕಟ್ಟಡ ಕಾಮಗಾರಿಗೆ ಅವಕಾಶ ನೀಡಬಾರದು. ಅಗಲೀಕರಣಗೊಂಡ ಬಳಿಕ ಪಂಚಾಯತ್ ವತಿಯಿಂದ ಸಣ್ಣ ಸಣ್ಣ ವಾಣಿಜ್ಯ ಕಟ್ಟಡ ನಿರ್ಮಿಸುವಂತೆ ಸೂಚಿಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಂಜಂದಾಯ ಬಂಟ ವೈದ್ಯನಾಥ ಕೊರಗತನಿಯ ದೈವದ ಆದಿಸ್ಥಳ ಟ್ರಸ್ಟ್ ಮಹಾಬಲ ಹೆಗ್ಡೆ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೆಹನಾ ಬಾನು, ಉಪಾಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮಾರ್, ರತ್ನಾಕರ ಕಾವ,   ಮಾಜಿ ಅಧ್ಯಕ್ಷರಾದ ವಿಲ್ಫ್ರೆಡ್ ಡಿಸೋಜ, ವಿಶಾಲಾಕ್ಷಿ ಸುಭಾಷನಗರ, ಪ್ರೀತಮ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ಮಾಯಿಲ ರಾಣಿಪುರ, ಲೋಕೋಪಯೋಗಿ ಇಲಾಖೆ ಹಾಗೂ ಮುಡಾ ಅಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article