
ವೀರ ರಾಣಿ ಅಬ್ಬಕ್ಕ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಉಳ್ಳಾಲ: ಕಲೆ ಮತ್ತು ಸಂಸ್ಕೃತಿ ಎಂದಿಗೂ ಸಮಾಜವನ್ನು ಜಾಗೃತಗೊಳಿಸುವ ಶಕ್ತಿಯಾಗಿದೆ. ವೀರರಾಣಿ ಅಬ್ಬಕ್ಕ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶ್ರೇಷ್ಠ ಪರಂಪರೆಯ ಸ್ಮರಣೆಯನ್ನು ಜನರಿಗೆ ನೆನಪಿಸುವಂತಾಗಲಿ. ಸಂಗೀತ, ನೃತ್ಯ, ನಾಟಕ, ಮತ್ತು ವಿವಿಧ ಕಲಾ ರೂಪಗಳು ಅಬ್ಬಕ್ಕರ ತತ್ವಗಳನ್ನು ಬಿಂಬಿಸಲಿ ಎಂದು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು.
ಫೆ.22 ರಂದು ಉಳ್ಳಾಲದ ಮಹಾತ್ಮಗಾಂಧಿ ರಂಗಮಂದಿರದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವ 2024-25 ರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಕುತ್ತಾರಿನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ವೀರರಾಣಿ ಅಬ್ಬಕ್ಕಳ ಊರಾದ ಉಳ್ಳಾಲದಲ್ಲಿ ಸಾಹಿತ್ಯ, ಕಲೆ ವಿಚಾರಗಳಿಗೆ ಅಪಾರ ಸಾಧನೆಗಳು ನಡೆದಿದೆ. ಫೆ.22 ರಂದು ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವ ಯಶಸ್ವಿಯಾಗಿ ಜರಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ದರ್ಶಿ ಧನಲಕ್ಷ್ಮಿಗಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು.
ಈ ಸಂದರ್ಭದಲ್ಲಿ ನಾಟ್ಯನಿಕೇತನ ಕೊಲ್ಯ ಇದರ ನಿರ್ದೇಶಕಿ ವಿಧುಷಿ ರಾಜಶ್ರೀ ಉಳ್ಳಾಲ್, ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಆರ್. ಉಳ್ಳಾಲ್, ಸಮಿತಿ ಪದಾಧಿಕಾರಿಗಳಾದ ಸತೀಶ್ ಭಂಡಾರಿ, ಶಶಿಕಲಾ ಗಟ್ಟಿ, , ಹೇಮಾ ಕಾಪಿಕಾಡ್, ಆಶಾ, ನಾಗರತ್ನ, ಸತ್ಯವತೀ ಜಿ.ಉಳ್ಳಾಲ್, ಸುನೀತಾ ಗಟ್ಟಿ, ರೇವತಿ ಮತ್ತಿತರರು ಉಪಸ್ಥಿತರಿದ್ದರು.
ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತಿ ಜಿ. ಉಳ್ಳಾಲ್ ವಂದಿಸಿದರು.