
ರೈತರಿಗೆ ಬಂಪರ್ ಕೊಡುಗೆ
Friday, March 7, 2025
ಬಂಟಕಲ್ಲು: ಇಂದಿನ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ಶಿಕ್ಷಣ, 1.81 ಲಕ್ಷ ರೈತರಿಗೆ ತುಂತುರು ಮತ್ತು ಹನಿನೀರಾವರಿ ಘಟಕ ಸ್ಥಾಪನೆಗೆ 440 ಕೋಟಿ ರೂ. ಕೊಡುಗೆ, 12 ಸಾವಿರ ಕೃಷಿಹೊಂಡ ನಿರ್ಮಾಣ, 6000 ಕಿರು ಆಹಾರ ಘಟಕಗಳಿಗೆ ಅನುದಾನ, 50 ಸಾವಿರ ರೈತರಿಗೆ ಯಾಂತ್ರಿಕರಣ ಯೋಜನೆಯಲ್ಲಿ ಸಹಾಯಧನ ಹೀಗೆ ಹತ್ತುಹಲವು ಯೋಜನೆಗಳಿವೆ. ಸರಕಾರ ಗ್ಯಾರಂಟಿಗಳ ಅನುಷ್ಠಾನಕ್ಕೆ ಒತ್ತು ನೀಡುವುದರಿಂದ ಈ ಯೋಜನೆಗಳು ಘೋಷಣೆಗಳಾಗಿಯೇ ಉಳಿಯುವ ಸಾಧ್ಯತೆ ಇದೆ. ಅನುಷ್ಠಾನವಾದರೆ ಕೃಷಿಗೆ ಹಾಗೂ ರೈತರಿಗೆ ವರವಾಗಲಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು ತಿಳಿಸಿದ್ದಾರೆ.