ಉಪಮುಖ್ಯಂಮತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಯನ್ನು ಖಂಡಿಸಿ ಬಿ.ಸಿ.ರೋಡಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಉಪಮುಖ್ಯಂಮತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಯನ್ನು ಖಂಡಿಸಿ ಬಿ.ಸಿ.ರೋಡಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ


ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಇದರ ವತಿಯಿಂದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವ ಉಪಮುಖ್ಯಂಮತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ವಿರೋಧಿಸಿ ಬಂಟ್ವಾಳ ಮಂಡಲ ವತಿಯಿಂದ ಬಿಸಿರೋಡಿನ ಪ್ಲೈ ಓವರ್‌ನ ಅಡಿಯಲ್ಲಿ ಪ್ರತಿಭಟನೆ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಹನಿಟ್ರ್ಯಾಫ್ ವಿಚಾರದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದ ವೇಳೆ ಸದನದಲ್ಲಿ ಗೊಂದಲದ ವಾತವಾರಣ ಸೃಷ್ಠಿಯಾಗಿದ್ದು, ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಸಂವಿಧಾನ ವಿರೋಧಿ ಬಿಲ್ಲಿಗೆ ಅನುಮೋದನೆ ಪಡೆಯಲು ಕಾಂಗ್ರೆಸ್ ಮುಂದಾದಾಗ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೇ ನೆಪವಾಗಿರಿಸಿ ಸ್ಪೀಕರ್ ಅವರು ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.


ಈ ಹಿಂದೆ ವಿಧಾನಪರಿಷತ್‌ನಲ್ಲಿ ಸಭಾಪತಿಯವರನ್ನು ಪೀಠದಿಂದ ಎಳೆದಾಕಿದಾಗ ಯಾರನ್ನು ಅಮಾನತು ಮಾಡಿರಲಿಲ್ಲ ಎಂದು ನೆನಪಿಸಿದ ಅವರು, ಸಂವಿಧಾನದ ರಕ್ಷಕರು ನಾವೆಂದು ತಿರುಗಾಡುವ ಕಾಂಗ್ರೆಸಿಗರು, ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿಕೆಶಿಯವರು ಜನತೆಯ ಕ್ಷಮೆ ಕೇಳಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಿಯೋನಿಕ್ಸ್ ನಿಗಮದ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಅನಂತಕುಮಾರ್ ಹೆಗಡೆ ಸಂಸದರಾಗಿದ್ದಾಗ ಸಂವಿಧಾನ ಬದಲಿಸುವ ಮಾತನಾಡಿದ್ದರೆಂದು ರಾಜಿನಾಮೆ ಕೇಳಿದ್ದ ಇದೇ ಡಿಕೆಶಿವಕುಮಾರ್ ಅವರು ಈಗ ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವುದರಿಂದ ಅವರೇ ಸ್ವಯಂಪ್ರೇರಿತರಾಗಿ ರಾಜಿನಾಮೆ ಕೊಡಬೇಕು, ಇಲ್ಲವೇ ಪಕ್ಷ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಾತಿ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ವಂಶಾಡಳಿತ, ಮುಸ್ಲಿಂ ತುಷ್ಠೀಕರಣ ರಾಜಕಾರಣ ಮಾಡುತ್ತಾ ಬಂದಿದ್ದರೆ, ಬಿಜೆಪಿ ಇದ್ಯಾವುದನ್ನು ಮಾಡಿಲ್ಲ, ಮೋದಿಯವರು ಅಖಂಡ ಭಾರತದ ಶಕ್ತಿಯುತ ಪ್ರಧಾನಿಯಾಗಿದ್ದಾರೆ. ನೆಹರು ಅವರಿಂದ ಹಿಡಿದು ರಾಹುಲ್ ಗಾಂಧಿವರೆಗೆ ಮುಸ್ಲೀಂ ತುಷ್ಟೀಕರಣದ ಬಗ್ಗೆ ಮಾತನಾಡಿದ್ದು ಅವರದು ಮಹಮ್ಮದ್ ಜಿನ್ನನ ಹೃದಯವಾಗಿದೆ ಎಂದು ವ್ಯಂಗ್ಯವಾಡಿದರು.

ಧರ್ಮಾಧರಿತ ಮೀಸಲು ನೀಡುವುದೇ ಕೆಟ್ಟಪರಂಪರೆಯಾಗಿದೆ, ಭಾರತ ಯಾವತ್ತು ಕೂಡ ಮುಸ್ಲಿಂ ರಾಷ್ಟ್ರ ಅಗಲು ಸಾಧ್ಯವೇ ಇಲ್ಲ ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ ಎಂದ ಅವರು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ದುರದೃಷ್ಟಕರವಾಗಿದ್ದು, ಇದೊಂದು ದೂರದೃಷ್ಟಿಯ ದುರುದ್ದೇಶಪೂರಿತ ನಿರ್ಣಯವಾಗಿದೆ ಇದಕ್ಕೆ ಮುಂದಿನ ದಿನದಲ್ಲಿ ತುಳುನಾಡಿನ ಮಣ್ಣು ಉತ್ತರ ನೀಡಲಿದೆ ಎಂದರು.

ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಬಿಜೆಪಿ ರಾಜ್ಯ ನಾಯಕಿ ಸುಲೋಚನ ಜಿ.ಕೆ. ಭಟ್ ಮಾತನಾಡಿದರು.

ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ, ಪ್ರಭಾಕರ ಪ್ರಭು, ದಿನೇಶ್ ಅಮ್ಟೂರು, ರವೀಂದ್ರ ಕಂಬಳಿ, ದಿನೇಶ್ ಭಂಡಾರಿ, ರೋನಾಲ್ಡ್ ಡಿಸೋಜ, ಕಮಾಲಾಕ್ಷಿ ಪೂಜಾರಿ, ನಂದರಾಮ ರೈ, ಡೊಂಬಯ ಅರಳ, ಪುರುಷೋತ್ತಮ ಸಾಲಿಯಾನ್, ಗೋವಿಂದ ಪ್ರಭು, ದಿನೇಶ್ ಶೆಟ್ಟಿ ದಂಬೇದಾರು, ಸುರೇಶ್ ಕುಲಾಲ್, ತುಂಗಪ್ಪ ಬಂಗೇರ, ದೇವಪ್ಪ ಪೂಜಾರಿ, ಹರಿಪ್ರಸಾದ್ ಭಂಡಾರಿಬೆಟ್ಟು, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಶೆಟ್ಟಿ ವಾಮದಪದವು, ಕಾರ್ತಿಕ್ ಬಲ್ಲಾಳ್, ಪದ್ಮನಾಭ ಬಿ. ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿದರು. ಇನ್ನೋರ್ವ ಪ್ರ.ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಬಳಿಕ ಡಿ.ಕೆ. ಶಿವಕುಮಾರ್ ಅವರ ಪ್ರತಿ ಕೃತಿಯನ್ನು ದಹನ ಮಾಡಿ, ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article