ಕಾರು ಬೈಕ್ ಢಿಕ್ಕಿ: ಸವಾರ ಸಾವು-ಮಗನ ಸಾವಿನ ಸುದ್ಧಿಯಿಂದ ತಾಯಿಯೂ ಮೃತ್ಯು

ಕಾರು ಬೈಕ್ ಢಿಕ್ಕಿ: ಸವಾರ ಸಾವು-ಮಗನ ಸಾವಿನ ಸುದ್ಧಿಯಿಂದ ತಾಯಿಯೂ ಮೃತ್ಯು


ಶಿರ್ವ: ಮಾ.23 ರಂದು ಬಂಟಕಲ್ಲು-ಪಾಂಬೂರು ಮಾರ್ಗದಲ್ಲಿ ತೆರಳುತ್ತಿದ್ದ ಬೈಕ್ ಸವಾರನಿಗೆ ಎದುರು ಭಾಗದಿಂದ ಬಂದ ಕಾರು ಪಾಂಬೂರು ಸಮೀಪ ಢಿಕ್ಕಿ ಹೊಡೆದ ಪರಿಣಾಮ ಸವಾರ ರಮೇಶ ಮೂಲ್ಯ(51) ತೀವ್ರ ಗಾಯಗೊಂಡಿದ್ದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರ್ರೆಗೆ ದಾಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮಾ.24ರ ರಾತ್ರಿ ಮೃತಮಟ್ಟದ್ದರು.

ಮೃತಪಟ್ಟ ರಮೇಶ್ ಅವರ ದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಮಂಗಳವಾರ ಶಿರ್ವ ಕೊಲ್ಲಬೆಟ್ಟು ಅವರ ಮನೆಗೆ ತರಲಾಯಿತು. ಮಗನ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ ಅಘಾತಗೊಂಡ ತಾಯಿ ಇಂದಿರಾ ಮೂಲ್ಯ(74) ತೀವ್ರ ಅಸ್ವಸ್ಥರಾಗಿ ಕೋಮಾಕ್ಕೆ ತೆರಳಿದ್ದು ಮಂಗಳವಾರ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.  

ಚಿಕಿತ್ಸೆ ಫಲಕಾರಿಯಾಗದೆ ತಾಯಿಯೂ ಮಾ.26 ರಂದು ಮೃತಪಟ್ಟ ಘಟನೆ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಒಂದು ದಿನದ ಅಂತರದಲ್ಲಿ ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದು ಪರಿಸರದಲ್ಲಿ ಶೋಕದ ಛಾಯೆ ಆವರಿಸಿದೆ. 

ರಮೇಶ್ ಮೂಲ್ಯ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article