
ಪ್ರೊ. ಲೀಲಾ ನಾಯರ್ ನಿಧನ
Wednesday, March 26, 2025
ಮಂಗಳೂರು: ಮಂಗಳೂರು ವಿ.ವಿ. ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಪ್ರೊ. ಲೀಲಾ ನಾಯರ್ (72) ಮಂಗಳವಾರ ರಾತ್ರಿ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.
ಅವರು ಮುಳಬಾಗಿಲಿನಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿ, 1990ರಲ್ಲಿ ಮಂಗಳೂರು ವಿ.ವಿ. ಕಾಲೇಜಿಗೆ (ಆಗಿನ ಸರ್ಕಾರಿ ಕಾಲೇಜು) ಉಪನ್ಯಾಸಕಿಯಾಗಿ ಆಗಮಿಸಿದರು. 24 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾಗಿ 2014ರಲ್ಲಿ ಸೇವಾ ನಿವೃತ್ತಿ ಹೊಂದಿದರು.
ಮೃತರು ಪತಿ ಮಂಗಳೂರು ವಿ.ವಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ನಾರಾಯಣನ್ ನಾಯರ್, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೃದು ಮಾತಿನ ಲೀಲಾ ನಾಯರ್ ವಿದ್ಯಾರ್ಥಿಗಳ ಬಗ್ಗೆ ಪ್ರೀತಿ, ಮಮತೆ ಹೊಂದಿದ್ದ ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದರು.