
ಜವಾಹರ್ ಬಾಲ್ ಮಂಚ್ ದ.ಕ. ಜಿಲ್ಲಾಧ್ಯಕ್ಷರಾಗಿ ಶೈಲಜಾ ರಾಜೇಶ್ ಆಯ್ಕೆ
Wednesday, March 26, 2025
ಬಂಟ್ವಾಳ: ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ(ರಿ)ಯ ಸಂಸ್ಥಾಪಕರಾದ ಬಿ.ಸಿ.ರೋಡಿನ ನ್ಯಾಯವಾದಿ ಶೈಲಜಾ ರಾಜೇಶ್ ಚಿವರನ್ನು ಜವಾಹರ್ ಬಾಲ್ ಮಂಚ್‌ನ ದ.ಕ. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಜವಾಹರ್ ಬಾಲ್ ಮಂಚ್ ರಾಷ್ಟ್ರೀಯಾಧ್ಯಕ್ಷ ಡಾ. ಹರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ, ರಾಷ್ಟ್ರೀಯ ಬಿಲ್ಲವ ಮಂಡಲದ ಸಂಚಾಲಕಿ, ಜೆಸಿಐ ಇಂಡಿಯಾ ಇದರ ವಲಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.