
ಪಾಣೆಮಂಗಳೂರು ಸೇತುವೆಯಿಂದ ನದಿಗೆ ದುಮುಕಿ ಆತ್ಮಹತ್ಯೆಗೆತ್ನಿಸಿದಾತನ ರಕ್ಷಣೆ
Tuesday, March 4, 2025
ಬಂಟ್ವಾಳ: ಮಂಗಳೂರಿನ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಬದಿಗೆ ತಡೆಬೇಲಿ ಹಾಕಿರುವುದರಿಂದ ನದಿಗೆ ದುಮುಕಿ ಆತ್ಮಹತ್ಯೆಗೆ ಬಯಸುವವರು ಇದೀಗ ಪಾಣೆಮಂಗಳೂರಿನ ನೇತ್ರಾವತಿ ಸೇತುವೆಯನ್ನೇ ನೆಚ್ಚಿಕೊಂಡಂತಿದೆ.
ಮಂಗಳವಾರವು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ನದಿಗೆ ಹಾರಿ ಸಾಯಲೆಂದೆ ಬಂದಿದ್ದಾನೆ. ಬೆಳಗ್ಗೆ ಪಾಣೆಮಂಗಳೂರು ಸೇತುವೆಯಿಂದ ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯ ರಸ್ತೆ ನಿವಾಸಿ ವೆಂಕ್ಟಯ್ಯ ಎಂಬವರ ಪುತ್ರ ಶಂಕರಯ್ಯ (50) ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ.
ಸಾಯಲೆಂದೆ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದನೆನ್ನಲಾಗಿದೆ. ಸೇತುವೆ ಮೇಲಿನಿಂದ ನೀರಿಗೆ ದುಮುಕಿದ ಮಾಹಿತಿ ಪಡೆದ ಸಿದ್ದೀಕ್ ಎಂ.ಕೆ.ರೋಡ್ ಅವರು ಶಂಕರಯ್ಯರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸರವಿಯಾಗಿದ್ದಾರೆ.
ಉಪವಾಸದ ಸಂದರ್ಭದಲ್ಲಿಯು ನಡೆಸಿದ ರಕ್ಷಣಾ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ಸಮಸ್ಯೆಯೇ ಕಾರಣ ಎಂದು ತಿಳಿದು ಬಂದಿದೆ ನಂತರ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.