
ವೆಂಕಟರಮಣನಿಗೆ ನೂತನ ಸರವರ್ಣ ಪೀಠ ಸಮರ್ಪಣೆ
Wednesday, March 5, 2025
ಬಂಟ್ವಾಳ: ಯಕ್ಷಗಾನ, ಮಲ್ಲಿಗೆ ಪ್ರಿಯ ಎಂದೇ ಖ್ಯಾತಿ ಹೊಂದಿರುವ ಬಂಟ್ವಾಳ ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ದೇವಸ್ಥಾನದ 201ನೇ ವರ್ಷದ ಬ್ರಹ್ಮರಥೋತ್ಸವದ ಹಿನ್ನಲೆಯಲ್ಲಿ ಬುಧವಾರ ಪಟ್ಟದ ಶ್ರೀದೇವರಿಗೆ ಹತ್ತು ಸಮಸ್ತರ ವತಿಯಿಂದ ‘ನೂತನ ಸ್ವರ್ಣ ಪೀಠ’ವನ್ನು ಸಮರ್ಪಿಸಲಾಯಿತು.
ಅದೇ ರೀತಿ ಮೂಲ ಪ್ರತಿಷ್ಠಾ ವರ್ದಂತಿ ಪ್ರಯುಕ್ತವಾಗಿ ಶತಕಲಶಾಭಿಷೇಕವು ನೆರವೇರಿತು.
ಬಳಿಕ ಬೆಳ್ಳಿಲಾಲ್ಕಿ ಹಗಲೋತ್ಸವ, ರಾತ್ರಿ ಜಲ ಕ್ರೀಡೆ, ಗೋಪುರೋತ್ಸವ, ಬೆಳ್ಳಿ ಲಾಲ್ಕಿ ಉತ್ಸವ, ಬೆಳ್ಳಿ ರಥೋತ್ಸವವು ಸಂಭ್ರಮ ಸಡಗರದಿಂದ ನೆರವೇರಿತು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು, ನೂರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.