
ಮಾ.18 ರಿಂದ 23 ರವರೆಗೆ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವ
ಮಂಗಳೂರು: ಮಾ.18 ರಿಂದ ಮಾ.23 ರವರೆಗೆ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಮಾ.15 ರಂದು ಬೆಳಗ್ಗೆ 10 ಗಂಟೆಗೆ ಸಂತೆ ಸ್ಟಾಲ್‌ಗಳನ್ನು ಏಲಂ ಕರೆಯಲಾಗುವುದು. ಧ್ವಜ ಸ್ತಂಭಕ್ಕೆ ಅಡಿಕೆ ಗೊನೆ ಸಿಯಾಳ ಗೊನೆ ಬಾಳೆ ಹಣ್ಣಿನ ಗೊನೆ ತಂದು ಕೊಡುವವರು ಮಾ.17 ರ ಸಂಜೆಯ ಒಳಗಾಗಿ ಕೊಡಬೇಕಾಗಿ ತಿಳಿಸಲಾಗಿದೆ.
ಮಾ.19 ರಂದು 108 ತೆಂಗಿನಕಾಯಿ ಗಣಹೋಮ ಜರಗಲಿದೆ. ಮಾ.22 ರಂದು ಶ್ರೀದೇವಿಯ ಶಯನಕ್ಕೆ ಹೂಗಳನ್ನು ತಂದು ಕೊಡುವವರು ಅದೇ ದಿನ ಸಂಜೆಯ ಒಳಗೆ ಕೊಡಬೇಕಾಗಿ ವಿನಂತಿಸಿಕೊಂಡಿದೆ.
ಮಾ.23 ರಂದು ಬೆಳಗ್ಗೆ 9.30ಕ್ಕೆ ಹರಕೆಯ ತುಲಾಭಾರ ನಡೆಯಲಿದ್ದು, ಮಾ.20 ರಂದು ಹಾಗೂ ಮಾ.31 ರಂದು ಬೆಳಿಗ್ಗೆ 9.30ಕ್ಕೆ ಸೀರೆ ಏಲಂ ನಡೆಯಲಿದೆ. ಮಾ.22 ರಂದು ಮಧ್ಯಾಹ್ನ 12 ಗಂಟೆಗೆ ಪೂಜೆಯಾಗಿ ರಥಾರೋಹಣ ನಂತರ ಸಂಜೆ 7 ಗಂಟೆಗೆ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ಶಯನ ನಡೆಯಲಿದೆ.
ಮಾ.23 ರಂದು ಬೆಳಗ್ಗೆ ಸೂರ್ಯೋದಯಕ್ಕೆ (ಗಂಟೆ 6.34ಕ್ಕೆ) ಕವಾಟೊದ್ಘಾಟನೆ ನಡೆಯಲಿರುವುದು, ಸಂಜೆ 7 ಗಂಟೆಗೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ. ಮಾ.24 ರಂದು ಸಂಪ್ರೋಕ್ಷಣೆ, ರಾತ್ರಿ 8.30ಕ್ಕೆ ಶ್ರೀ ಕ್ಷೇತ್ರದ ಪರಿವಾರ ದೈವಗಳಿಗೆ ನೇಮೋತ್ಸವ ಜರಗಲಿದೆ. ಜಾತ್ರೋತ್ಸವ ಸಮಯದಲ್ಲಿ ಪ್ರತಿ ದಿನ ಮಧ್ಯಾಹ್ನದ ಮಹಪೂಜೆಯ ನಂತರ ಅನ್ನಸಂತರ್ಪನೆ ಜರುಗಲಿದೆ.
ಪ್ರತಿ ದಿನ ಸಂಜೆ ಸಾಂಸ್ಕೃತಿ ಕಾರ್ಯಕ್ರಮ ಜರಗಲಿರವುದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯನ್ನು ಮಂಗಳೂರಿನ ಇನ್ ಟೈಮ್ ಗ್ರೂಪ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಟಿ.ಎ. ಅಶೋಕನ್ ಉದ್ಘಾಟಿಸಲಿದ್ದಾರೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.