
ಮಾ.13-19: ವಿಶ್ವ ಕಿಡ್ನಿ ದಿನ-2025
ಮಂಗಳೂರು: ವಿಶ್ವ ಕಿಡ್ನಿ ದಿನ-2025 ರ ಥೀಮ್ ‘ನಿಮ್ಮ ಮೂತ್ರಪಿಂಡಗಳು ಸರಿಯಾಗಿವೆಯೇ?-ಬೇಗನೆ ಪತ್ತೆ ಮಾಡಿ, ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸಿ’ ಅನುಗುಣವಾಗಿ ಇಂಡಿಯಾನಾ ಹಾಸ್ಪಿಟಲ್ ಆಂಡ್ ಹಾರ್ಟ್ ಇನ್ಸ್ಟಿಟ್ಯೂಟ್ ಮಂಗಳೂರು ಮಾ.13 ರಿಂದ 19 ರವರೆಗೆ ಕಿಡ್ನಿ ಆರೋಗ್ಯ ವಾರವನ್ನು ಆಚರಿಸಲಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ 2250 ರೂ.ನ ಕಿಡ್ನಿ ತಪಾಸಣಾ ಪ್ಯಾಕೇಜ್ ಅನ್ನು ಕೇವಲ 1299 ರೂ.ಗೆ ನೀಡುತ್ತಿದೆ.
ಚೆಕ್-ಅಪ್ ಪ್ಯಾಕೇಜ್‌ನಲ್ಲಿ ನೋಂದಣಿ, ಕ್ರಿಯೇಟಿನಿನ್, ರಕ್ತದ ಸಕ್ಕರೆ ಪರೀಕ್ಷೆ, ಮೂತ್ರ ಪರೀಕ್ಷೆ, ಅಲ್ಟ್ರಾಸೌಂಡ್ (ಹೊಟ್ಟೆ), ನೆಫ್ರಾಲಜಿಸ್ಟ್‌ರೊಂದಿಗೆ ಸಮಾಲೋಚನೆ ನೀಡಲಾಗುವುದು.
ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಹೊರ ರೋಗಿ ಪರೀಕ್ಷೆಗಳು ಅಗತ್ಯವಿದ್ದಲ್ಲಿ ಶೇ.20 ರಿಯಾಯಿತಿ ಮತ್ತು ಒಳ ರೋಗಿ ಚಿಕಿತ್ಸೆ ರಿಯಾಯಿತಿ ದರದಲ್ಲಿ ನೀಡಲಾಗುವುದು. ಕಿಡ್ನಿ ಟ್ರಾನ್ಸ್‌ಪ್ಲಾಂಟ್ (ಸಂಬಂಧಿತ ದಾನಿಗಳಿಂದ ಮಾತ್ರ) ಮೇಲೆ ವಿಶೇಷ ರಿಯಾಯಿತಿ.
ಶಿಬಿರದಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರು, ಕಿಡ್ನಿ ಸಮಸ್ಯೆಯ ಕುಟುಂಬ ಇತಿಹಾಸ, ಮೂತ್ರಪಿಂಡದ ಕಲ್ಲುಗಳ ಇತಿಹಾಸ, ಮೂತ್ರಪಿಂಡದ ಕಿಡ್ನಿ ಸಮಸ್ಯೆಯ ಹಿಂದಿನ ಇತಿಹಾಸ ಇರುವವರು ಭಾಗವಹಿಸಬಹುದು.
ಹೆಸರನ್ನು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ.ನಂ. 725901650ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.