17 ಮೆಟ್ರಿಕ್ ಟನ್ ಮರಳು ವಶ

17 ಮೆಟ್ರಿಕ್ ಟನ್ ಮರಳು ವಶ


ಮಂಗಳೂರು: ನಗರದ ಹೊರವಲಯದ ಅಡ್ಡೂರಿಗೆ ಗಣಿ, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಲಾರಿ ಹಾಗೂ 17 ಮೆಟ್ರಿಕ್ ಟನ್‌ ಮರಳು ವಶಪಡಿಸಿದ್ದಾರೆ.

ಅಡ್ಡೂರಿನಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಗಣಿಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಲಾರಿಯನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಲಾರಿಯನ್ನು ಅಲ್ಲಿಯೇ ಬಿಟ್ಟು ಲಾರಿಯಲ್ಲಿದ್ದವರು ಪರಾರಿಯಾಗಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಜಪೆ ಪೊಲೀಸರು ಲಾರಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಲಾರಿಯ ಮೌಲ್ಯ 8 ಲಕ್ಷ ರೂ. ಹಾಗೂ 17 ಮೆಟ್ರಿಕ್ ಟನ್ ಮರಳಿನ ಮೌಲ್ಯ 15,000 ರು. ಎಂದು ಅಂದಾಜಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article