
ರಾಮಕೃಷ್ಣ ಮಠದಲ್ಲಿ ಎರಡು ವಾರಗಳ ಕಾಲ ನಡೆಯುವ ಯೋಗ ಶಿಬಿರಕ್ಕೆ ಚಾಲನೆ
ಮಂಗಳೂರು: ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠದಲ್ಲಿ ಮಾರ್ಚ್ ತಿಂಗಳಲ್ಲಿ ಎರಡು ವಾರಗಳ ಕಾಲದ ಶಿಬಿರವನ್ನು ಹಿರಿಯ ಯೋಗ ಬಂಧು ತುಕಾರಾಮ ಅವರು ದೀಪ ಪ್ರಜ್ವಲನೆಗೈಯುವದರೊಂದಿಗೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಹಿಂದೂ ಪತ್ರಿಕೆಯ ಹಿರಿಯ ಸಂಪಾದಕ ರವಿ ಕಮಿಲ ಭಾಗವಹಿಸಿದರು. ವಿಶೇಷ ಅತಿಥಿಯಾಗಿ ಪ್ರೊ. ಡಾ. ಮಹೇಶ್ ಅವರು ಶಿಬಿರಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ಗುರು ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಮಾತನಾಡುತ್ತಾ
ರಾಮಕೃಷ್ಣ ಮಠದಲ್ಲಿ ಹಲವಾರು ವರ್ಷಗಳಿಂದ ನಿರಂತರ ಯೋಗ ಜರುಗುತ್ತಿದೆ. ಈ ಶಿಬಿರದಲ್ಲಿ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗದ ಮಹತ್ವ ಮತ್ತು ಪ್ರಯೋಜನಗಳನ್ನು ತಿಳಿಸಿದರು. ‘ಯೋಗ’ ಎಂಬ ಪದವು ಸಂಸ್ಕೃತ ಮೂಲ ಪದ ‘ಯುಜ್’ನಿಂದ ಬಂದಿದೆ. ಇದರರ್ಥ ‘ನೊಗ ಮಾಡುವುದು’ ಅಥವಾ ‘ಬಂಧಿಸುವುದು’. ಯೋಗದ ಹಲವು ಸಂಭಾವ್ಯ ಪ್ರಯೋಜನಗಳಲ್ಲಿ ಸುಧಾರಿತ ನಮ್ಯತೆ, ಶಕ್ತಿ ಮತ್ತು ದೇಹದ ಅರಿವು ಸೇರಿವೆ. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಯೋಗ ಆಸನಗಳ ಅಭ್ಯಾಸವು ಶಕ್ತಿ ಮತ್ತು ನಮ್ಯತೆಯನ್ನು ಬೆಳೆಸುತ್ತದೆ. ಅದೇ ಸಮಯದಲ್ಲಿ ನಿಮ್ಮ ನರಗಳನ್ನು ಶಮನಗೊಳಿಸುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಆಸನಗಳು ಸ್ನಾಯುಗಳು, ಕೀಲುಗಳು ಮತ್ತು ಚರ್ಮ ಮತ್ತು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತವೆ. ಗ್ರಂಥಿಗಳು, ನರಗಳು, ಆಂತರಿಕ ಅಂಗಗಳು, ಮೂಳೆಗಳು, ಉಸಿರಾಟ ಮತ್ತು ಮೆದುಳು ಯೋಗದ ಭೌತಿಕ ಕಟ್ಟಡ ಸಾಮಾಗ್ರಿಗಳು ಎಂದರು.
ಯೋಗವು ಎಲ್ಲಾ ವಯಸ್ಸಿನ ಜನರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ದೀರ್ಘಕಾಲದ ಸ್ಥಿತಿಯೊಂದಿಗೆ ಬದುಕುತ್ತಿದ್ದರೆ ಅಥವಾ ದೀರ್ಘಕಾಲದ ಸ್ಥಿತಿಯೊಂದಿಗೆ ಬದುಕುತ್ತಿದ್ದರೆ, ಯೊಗವು ನಿಮ ಚಿಕಿತ್ಸೆಯ ಅವಿಭಾಜ್ಯ ಅಂಗವಾಗಬಹುದು ಮತ್ತು ಗುಣಪಡಿಸುವಿಕೆಯನ್ನು ತ್ವರಿತಗೊಳಿಸಬಹುದು ಎಂದು ತಿಳಿಸಿದರು.
ದೇಲಂಪಾಡಿಂiವರ ಶಿಷ್ಯರಾದ ಸುಮ, ಹಾಗೂ ಚಂದ್ರಹಾಸ ಬಾಳ ಇವರು ಸಹಕರಿಸಿದರು. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಯೋಗದ ಬಗೆಗಿನ ಮಾಹಿತಿ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ತಿಳಿಸುವುದು. ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಯೋಗ ಚಕ್ರಗಳ ವರ್ಣ ಚಿಕಿತ್ಸೆ ಮಾಹಿತಿ, ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು.