
ಹಿಂದೂ ಓಬಿಸಿ ಹಕ್ಕುಗಳನ್ನು ಕಸಿದು ಮುಸ್ಲಿಮರಿಗೆ ನೀಡುವುದು ಖಂಡನಿಯ
Sunday, March 23, 2025
ಮಂಗಳೂರು: ಪ್ರಸ್ತುತ ಕರ್ನಾಟಕ ಸರ್ಕಾರವು ಹಲವು ಮಾರ್ಗಗಳಲ್ಲಿ ಮುಸ್ಲಿಮರನ್ನು ಓಲೈಸಲು ತೊಡಗಿಕೊಂಡಿದೆ. ಇದು ಹಿಂದೂಗಳ ಮೇಲಿನ ದ್ವೇಷದ ಪರಾಕಾಷ್ಠೆಯಾಗಿದೆ ಎಂದು ವಿಹೆಚ್‌ಪಿ ರಾಷ್ಟೀಯ ಮಹಾ ಪ್ರಧಾನ ಕಾರ್ಯದರ್ಶಿ ಬಜರಂಗಲಾಲ್ ಬಾಗಡ ತಿಳಿಸಿದರು.
ಅವರು ಅವರು ಬೆಂಗಳೂರು ನಗರದಲ್ಲಿ ನಡೆದ ಆರ್‌ಎಸ್‌ಎಸ್ ಪ್ರತಿನಿಧಿ ಸಭೆಯಲ್ಲಿ ಈ ಕುರಿತು ಮಾತನಾಡಿದರು.
ಮುಸ್ಲಿಮರಿಗೆ ನೀಡಿರುವ ಈ ಮೀಸಲಾತಿಯನ್ನು ಹಿಂದೂ ಓಬಿಸಿಗಳ ಹಕ್ಕುಗಳಿಂದ ಕಡಿತಗೊಳಿಸಲಾಗಿದೆ. ಇದು ಹಿಂದೂ ಓಬಿಸಿಗಳ ಹಕ್ಕುಗಳ ಮೇಲೆ ಧಾಳಿಯನ್ನು ನಡೆಸಿ, ಕಿತ್ತು ಮುಸ್ಲಿಮರಿಗೆ ನೀಡಿದಂತಾಗಿದೆ. ಈ ಕ್ರಮವನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ನಾವು ಈ ಹಿಮ್ಮುಖ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇವೆ ಮತ್ತು ಇದನ್ನು ತಡೆಯಲು ಎಲ್ಲಾ ರೀತಿಯ ಕಾನೂನು ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.