
ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನ: ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ
ಮಂಗಳೂರು: ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಾ.1ರಿಂದ 4ರವರೆಗೆ ನಡೆದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ವೈಭವದ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿದೆ. ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು.
ನೇಮೋತ್ಸವದ ಮೊದಲು ಫೆಬ್ರವರಿ-28ರಂದು ಧರ್ಮದರ್ಶಿ ಭಾಸ್ಕರ್ ಐತಾಳ್ ಕೊಲ್ಯ ಪೌರೋಹಿತ್ಯದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ನಂತರ ನಾಲ್ಕು ದಿನಗಳ ಕಾಲ ಸ್ಥಳದ ಗುಳಿಗ, ಶ್ರೀಬಬ್ಬುಸ್ವಾಮಿ-ತನ್ನಿಮಾನಿಗ, ರಾಹು ಗುಳಿಗ, ಪಂಜುರ್ಲಿ-ಗುಳಿಗ, ಧರ್ಮದೈವ, ಸುಬ್ಯಮ್ಮ-ಸುಬ್ಬಿ ಗುಳಿಗ, ಸಂಕಲೆ ಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ನೇಮೋತ್ಸವದ ನಾಲ್ಕು ದಿನವೂ ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶ್ರದ್ಧಾ ಭಕ್ತಿಯ ಕೇಂದ್ರಸ್ಥಾನ : ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನಕ್ಕೆ ಸುಮಾರು 150 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಪಾರಂಪರಿಕ ಭೂತಾರಾಧನೆಯನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರವು ಸರ್ವಧರ್ಮಿಯರ ಆರಾಧನಾ ಕೇಂದ್ರವಾಗಿ ಬೆಳಗುತ್ತಿದೆ . ಇಲ್ಲಿ ಬಬ್ಬು ಸ್ವಾಮಿಯ ಕಾರ್ನಿಕದ ಶಕ್ತಿ ಇದೆ . ಶ್ರೀ ಕ್ಷೇತ್ರದ ಆರಾಧನಾ ಕ್ರಮವು ಪಾರಂಪರಿಕವಾಗಿದ್ದು ಎಲ್ಲರ ಶ್ರದ್ಧಾ ಭಕ್ತಿಯ ಕೇಂದ್ರಸ್ಥಾನವಾಗಿದೆ ಎಂದು ದೈವಸ್ಥಾನದ ಗುರಿಕಾರ ಎಸ್. ರಾಘವೇಂದ್ರ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಬಬ್ಬುಸ್ವಾಮಿ ನೇಮೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಮಾಜಿ ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ಭರತ್ ಕುಮಾರ್ ಹಾಗೂ ಎಸ್ ಸಿಡಿಸಿಸಿ ಬ್ಯಾಂಕ್ ಸಿಇಓ ಗೋಪಾಲಕೃಷ್ಣ ಭಟ್ ಅವರನ್ನು ಗುರಿಕಾರರಾದ ಎಸ್. ರಾಘವೇಂದ್ರ ರವರು ಸಿರಿಮುಡಿ ಗಂಧಪ್ರಸಾದವನ್ನು ನೀಡಿ ಗೌರವಿಸಿದರು.
ದೈವಸ್ಥಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ , ಎಸ್.ಬಾಬು, ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್. ನವೀನ್, ಪ್ರಧಾನ ಅರ್ಚಕ ಎಸ್.ಗಣೇಶ, ಅರ್ಚಕ ಜಯ, ಪದಾಧಿಕಾರಿಗಳಾದ ಎಸ್. ಪವಿತ್ರ, ಎಸ್. ಮೋಹನ್, ಬಿ. ವಿಶ್ವನಾಥ್, ಎಸ್. ಜನಾರ್ಧನ, ಬಿ. ಗಣೇಶ್, ಎಸ್. ವಸಂತ, ಎಸ್. ಸುರೇಶ್, ಎಸ್. ಉಪೇಂದ್ರ, ಎಸ್. ಪ್ರವೀಣ್. ರಂಜಿತ್, ಭೋಜ, ಅನ್ನಪೂರ್ಣ ರಘುರಾಮ್, ಉಮಾಪ್ರಸಾದ್ ಎಂ.. ಪುರುಷೋತ್ತಮ ಪದಕಣ್ಣಾಯ, ಸುನಿಲ್ ರಾಜ್ ಪದಕಣ್ಣಾಯ, ಕಿರಣ್ ರಾಜ್ ಪದಕಣ್ಣಾಯ, ಅಪ್ಪಿ ಎಸ್., ಸುದೇಶ್ ಕುಮಾರ್, ತಿಲಕ್ ರಾಜ್, ರಾಹುಲ್ ಎಸ್., ಸಂತೋಷಕುಮಾರಿ, ಸಂದೀಪ್, ಕಿಶೋರ್, ರಕ್ಷಿತ್, ಇಂದಿರಾ ಮೋಹನ್‌ದಾಸ್, ಪ್ರಶಾಂತ್ ಪಿ.ಎಸ್., ಪ್ರವೀಣ್ ಪಿ.ಎಸ್., ಪ್ರಥ್ವೀಶ್ ಪಿ.ಎಸ್., ಸೂರಜ್ ಸಾಗರ್, ಎಸ್. ಪ್ರದೀಪ್, ರಕ್ಷಿತ್ ಬಿ.ಎಸ್., ದೀಕ್ಷಿತ್ ಬಿ.ಎಸ್., ರೋಹಿತ್ ಮೊದಲಾದವರು ಉಪಸ್ಥಿತರಿದ್ದರು.