
ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ ಸಂಸದ ಕ್ಯಾ. ಚೌಟ
ಮಂಗಳೂರು: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಇಂದು ದೆಹಲಿಯಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ಮಾಡಿ, ನಮ್ಮ ಪ್ರದೇಶದ ವಿವಿಧ ಹೆದ್ದಾರಿಗಳ ಮೂಲಸೌಕರ್ಯಗಳ ಸುಧಾರಣೆ ಕುರಿತಂತೆ ಚರ್ಚೆ ನಡೆಸಿದರು.
ಅವುಗಳಲ್ಲೂ ಪ್ರಮುಖವಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಚುರುಕು ನೀಡುವುದು (ಬಿ.ಸಿ. ರೋಡ್ ಮತ್ತು ಗುಂಡ್ಯ, ಸಕಲೇಶಪುರ ಮತ್ತು ಮಾರನಹಳ್ಳಿ ರಸ್ತೆ) ಹಾಗೂ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಮೇಲ್ದರ್ಜೆಗೇರಿಸುವ ಡಿಪಿಆರ್(ವಿಸ್ತೃತ ಯೋಜನಾ ವರದಿ) ಅಂತಿಮಗೊಳಿಸಲು ಸಚಿವಾಲಯದ ಮಧ್ಯಸ್ಥಿಕೆ ಕೋರಿದೆನು. ಇದರೊಂದಿಗೆ ಪ್ರತಿ ಮುಂಗಾರಿನಲ್ಲಿ ಘಟ್ಟ ಪ್ರದೇಶದ ಕಡಿದಾದ ಇಳಿಜಾರು ಮತ್ತು ಹೆಚ್ಚಿನ ಮಳೆಯಿಂದ ರಸ್ತೆ ಮೇಲೆ ಭೂಕುಸಿತ ಉಂಟಾಗಿ ಇದರಿಂದ ಜನಜೀವನ ಮತ್ತು ರಸ್ತೆಸಂಪರ್ಕದ ಮೇಲಾಗುವ ಪರಿಣಾಮಗಳ ಕುರಿತು ಒತ್ತಿ ಹೇಳಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಬಿ.ಸಿ ರೋಡ್ ಮತ್ತು ಮುಕ್ಕಾ ನಡುವಿನ ಬಂದರು ಸಂಪರ್ಕ ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹಾಗೂ ಎಸ್‌ಪಿವಿಯನ್ನು ವಿಸರ್ಜಿಸುವ ಮತ್ತು ಎನ್‌ಎಚ್‌ಎಐಗೆ ಅದರ ಸಂಪೂರ್ಣ ಜವಾಬ್ದಾರಿಯನ್ನು ನೀಡುವ ಅಗತ್ಯತೆಯ ಬಗ್ಗೆಯೂ ಈ ಸಂದರ್ಭ ಚರ್ಚಿಸಲಾಯಿತು.