ಮಂಗಳೂರು: ನಗರದ ಶೆಟ್ಟಿ ಆಟೋ ಪಾರ್ಕ್, ಅಪ್ಪಣ್ಣ ಕಟ್ಟೆ (ಹಂಪನಕಟ್ಟೆ) ಬಳಿ ದೈತ್ಯಾಕಾರದ ಮರದ ಕೊಂಬೆಯೊಂದು ಮುರಿದು ಬಿದ್ದು ಮೂವರು ವಿದ್ಯಾರ್ಥಿನಿಯರು ತೀವ್ರ ಗಾಯಗೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಪ್ರದೇಶ ಜನನಿಬಿಡವಾಗಿದ್ದು ಏಕಾಏಕಿ ಮರದ ಕೊಂಬೆ ಮುರಿದು ಬಿದ್ದ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ಅಲ್ಲೇ ನಿಂತಿದ್ದು ಬಹು ದೊಡ್ಡ ಅವಘಡವೊಂದು ತಪ್ಪಿದೆ.