.jpeg)
ದ.ಕ. ಜಿಲ್ಲೆಗೆ ಐತಿಹಾಸಿಕ ಬಜೆಟ್: ಹರೀಶ್ ಕುಮಾರ್
Friday, March 7, 2025
ಮಂಗಳೂರು: ದ.ಕ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟದೊಂದಿಗೆ ಮಂಡಿಸಿದ ಐತಿಹಾಸಿಕ ಬಜೆಟ್ ಆಗಿದೆ. ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವೈದ್ಯಕೀಯ ಕಾಲೇಜ್ ಮಂಜೂರು, ಶೈಕ್ಷಣಿಕ, ಆರೋಗ್ಯ, ಕ್ರೀಡೆ, ಜಲಸಾರಿಗೆ, ಮೀನುಗಾರಿಕಾ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಗಳಿಗೆ ಭರಪೂರ ಅನುದಾನ ನೀಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಉತ್ತಮ ಬಜೆಟ್ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.