
ಜನಸಾಮಾನ್ಯರ ಸಮತೋಲನದ ಬಜೆಟ್: ಐವನ್ ಡಿ'ಸೋಜಾ
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ 16ನೇ ಬಜೆಟ್ ಜನಸಾಮಾನ್ಯರ ಸಮತೋಲನದ ಎಲ್ಲಾ ವರ್ಗಗಳ ಏಳಿಗೆಯ ಪೂರಕ ಬಜೆಟ್ ಆಗಿದೆ.
ನಾಲ್ಕು ಕೋಟಿ ಓಂಬತ್ತು ಲಕ್ಷ ಕೋಟಿಗಳ ಬಜೆಟ್ ರಾಜ್ಯದ ಪ್ರಗತಿಯ ದಿಕ್ಸೂಚಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರಿಗೆ ಪಂಚ ಗ್ಯಾರಂಟಿಗಳಿಗೆ 51 ಕೋಟಿ ಮೀಸಲಿಡುವ ಮೂಲಕ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಚುನಾವಣೆಯಲ್ಲಿ ಕೊಟ್ಟಂತಹ ಪ್ರನಾಳಿಕೆಯನ್ನು ಮುಂದುವರಿಸುವ ಜೊತೆಗೆ ರಾಜ್ಯದ ಏಲ್ಲಾ ವರ್ಗಗಳಿಗೆ ಪ್ರತ್ಯೇಕವಾಗಿ ವಿದ್ಯಾರ್ಥಿಗಳಗೆ ಶಿಕ್ಷಣಕ್ಕೆ, ಹಾಸ್ಟೆಲ್‌ಗಳಿಗೆ ರೈತರಿಗೆ, ಕಾರ್ಮಿಕರಿಗೆ ಅಲ್ಪಸಂಖ್ಯಾತರಿಗೆ ಎಲ್ಲಾ ವರ್ಗಗಳ ಜನರ ಅಭಿವೃದ್ಧಿ ಮತ್ತು ಸಮಾಜವನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿರುತ್ತಾರೆ.
ಸಿದ್ದರಾಮಯ್ಯನವರ ಬಜೆಟ್ ಸಮಾಜಕ್ಕೆ ತನ್ನ 16ನೇ ಬಜೆಟ್ ಮಂಡನೆಯ ಸಂಪೂರ್ಣ ಅನುಭವನ್ನು ರಾಜ್ಯಕ್ಕೆ ನೀಡಿದ್ದಾರೆ. ಈ ಬಜೆಟ್ ಮೂಲಕ ರಾಜ್ಯದ ಅಭಿವೃದ್ಧಿ ಪಥ ಮುಂದೆ ತಂದುಕೊಳ್ಳುತ್ತದೆ. ಮತ್ತು ಸಮಾಜದ ಶಾಂತಿ ಮತ್ತು ಏಕತೆಗೆ ಒಂದು ಕೊಂಡಿಯಾಗಿ ಮೂಡಿಬರುತ್ತದೆ.
ರಾಜ್ಯದ ಎಲ್ಲಾ ವರ್ಗದ ಜನರಿಗೂ ರಾಜ್ಯದ ಸಂಪತ್ತು ಮುಟ್ಟಬೇಕು ಎಂಬಂತಹ ತತ್ವದಡಿಯಲ್ಲಿ ಈ ಬಜೆಟ್‌ನ್ನು ಮಂಡಿಸಲಾಗಿದೆ. ಈ ಬಜೆಟ್‌ನ್ನು ಸ್ವಾಗತಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಸ್ವಾಗತಿದ್ದಾರೆ.