
ಪ್ರಾಮಾಣಿಕತೆ ಮೆರೆದ ಪತ್ರಿಕಾ ವಿತರಕ
Saturday, March 22, 2025
ಮಂಗಳೂರು: ವೃತ್ತಪತ್ರಿಕೆ ವಿತರಕರೊಬ್ಬರು ದುಬಾರಿ ಮೊಬೈಲ್ ಫೋನ್ ಅನ್ನು ಅದರ ಮಾಲಕರಿಗೆ ಹಿಂದಿರುಗಿಸಿದ್ದಾರೆ. ಅವರ ಈ ಪ್ರಾಮಾಣಿಕತೆಯ ಕಾರ್ಯವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಸಂತ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜೋಯಲ್ ಅವರು, ಸುಮಾರು 1.25 ಲಕ್ಷ ರೂ. ಮೌಲ್ಯದ ತನ್ನ ಐಫೋನ್ ಕಳೆದುಕೊಂಡಿದ್ದರು. ಅವರ ಈ ಫೋನ್ ಮಂಗಳೂರಿನ ರೇಣುಕಾರಾಜ್ ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ವೃತ್ತಪತ್ರಿಕೆ ವಿತರಕ ರಮೇಶ್ ಅವರಿಗೆ ಸಿಕ್ಕಿತ್ತು.
ಆದರೆ ರಮೇಶ್ ಅವರು ಈ ಫೋನ್ ಇಟ್ಟುಕೊಳ್ಳದೇ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಫೋನ್‌ನ ನಿಜವಾದ ಮಾಲಕರನ್ನು ಪತ್ತೆಹಚ್ಚಲು ಸಹಾಯವಾಯಿತು. ಈ ಫೋನ್ ಅನ್ನು ಜೋಯಲ್ ಅವರದ್ದೇ ಎಂದು ಖಚಿತಪಡಿಸಿಕೊಂಡ ರಮೇಶ್ ಅವರು ತಕ್ಷಣವೇ ಅವರಿಗೆ ಹಸ್ತಾಂತರಿಸಿದ್ದಾರೆ. ರಮೇಶ್ ಅವರು ಪ್ರಾಮಾಣಿಕತೆಗಾಗಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.