
ವಿವಿ ಕಾಲೇಜಿನಲ್ಲಿ ಮಹಿಳಾ ದಿನ ಆಚರಣೆ
Sunday, March 9, 2025
ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ಮಹಿಳಾ ಕೋಶದ ಸಹಯೋಗದೊಂದಿಗೆ ಗ್ರಂಥಾಲಯದಲ್ಲಿ ಗ್ರಂಥಾವಲೋಕನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರೊ. ಗಣಪತಿ ಗೌಡ ಮಾತನಾಡಿ, ಮಹಿಳೆಯರು ಯಾವ ಕ್ಷೆತ್ರದಲ್ಲಿಯೂ ಕಡಿಮೆಯಿಲ್ಲ. ಪ್ರಸುತ್ತ ಕಾಲಘಟ್ಟದಲ್ಲಿ ಅಬಲೆಯರಂತೂ ಅಲ್ಲ. ನಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಆದರ್ಶವಾಗಿಟ್ಟುಕೊಂಡು, ಮೊಬೈಲ್ ಹೆಚ್ಚಾಗಿ ಬಳಕೆ ಮಾಡದೇ ಓದಿನ ಕಡೆಗೆ ಗಮನ ನೀಡಿದರೆ ನೀವು ಸಾಧಕರ ಪಟ್ಟಿ ಸೇರಲು ಸಾಧ್ಯವಿದೆ. ಆ ನಿಟ್ಟನಲ್ಲಿ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ದ್ವಿತೀಯ ಬಿಎ ವಿದ್ಯಾರ್ಥಿ ಮಾನ್ಯ, ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಪ್ರಿಯಂವದಾ ಹಾಗೂ ತೃತೀಯ ಬಿಎಸ್ಸಿ ವಿದ್ಯಾರ್ಥಿ ರಕ್ಷಿತಾ ಇವರುಗಳು ಕಮಲಾದೇವಿ ಚಟ್ಟೋಪಾಧ್ಯಾಯ, ಸಾವಿತ್ರಿ ಬಾ ಫುಲೆ, ಸಸ್ಯಶಾಸ್ತ್ರಜ್ಞೆ ಜಾನಕೀ ಅಮ್ಮಲ್ ಅವರ ಪರಿಚಯ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಗ್ರಂಥಪಾಲಕಿ ಡಾ. ವನಜಾ, ಐಕ್ಯುಎಸಿ ಸಂಯೋಜಕ ಡಾ. ಸಿದ್ಧರಾಜು ಎಂ.ಎನ್., ಹಿಂದಿ ವಿಭಾಗದ ಪ್ರೊ. ಸುಮ ಟಿ.ಆರ್., ಅಸ್ಮಾ, ಡಾ. ನಾಗರತ್ನ ಶೆಟ್ಟಿ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.