
ಬೀ-ಹ್ಯೂಮನ್ ವತಿಯಿಂದ ಮೂಡಬಿದ್ರಿ ಸರ್ಕಾರಿ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ವಿತರಣಾ ಯಂತ್ರ, ಟಿವಿ ಮತ್ತು ಕುರ್ಚಿಗಳ ಹಸ್ತಾಂತರ
ಮಂಗಳೂರು: ಬೀ-ಹ್ಯೂಮನ್ ಸಂಸ್ಥೆಯು ಆರೋಗ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಹೆಜ್ಜೆಗಳನ್ನು ಹಾಕುತ್ತಿದ್ದು, ಇತ್ತೀಚೆಗೆ ಸಂಸ್ಥೆಯು ಮೂಡಬಿದ್ರಿ ಸರ್ಕಾರಿ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ವಿತರಣಾ ಯಂತ್ರ, ಟಿವಿ ಮತ್ತು ಕುರ್ಚಿಗಳನ್ನು ದೇಣಿಗೆ ನೀಡಿತು.
ಬೀ-ಹ್ಯೂಮನ್ ಪ್ರತಿ ತಿಂಗಳು ಸುಮಾರು 90 ರೋಗಿಗಳಿಗೆ ಉಚಿತ 1000 ಡಯಾಲಿಸಿಸ್ ಸೇವೆಗಳನ್ನು ಒದಗಿಸುತ್ತಿದ್ದು, ಡಯಾಲಿಸಿಸ್ ರೋಗಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಸುಧಾರಿಸುವುದಕ್ಕೆ ಕೇಂದ್ರೀಕರಿಸಿ, ನೀರಿನ ವಿತರಣಾ ಯಂತ್ರ, ಟಿವಿ ಮತ್ತು ಕುರ್ಚಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮವನ್ನು ಬೀ-ಹ್ಯೂಮನ್‌ನ ಟ್ರಸ್ಟಿ ಶೆರೀಫ್ ಬೋಳಾರ್ (ವೈಟ್‌ಸ್ಟೋನ್) ಮತ್ತು ಅಬುಲಾಲ ಪುತ್ತಿಗೆ ಉದ್ಘಾಟಿಸಿ, ದೇಣಿಗೆಯ ವಸ್ತುಗಳನ್ನು ಆಸ್ಪತ್ರೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಬಳಿಕ ಆಬುಲಾಲ ಪುತ್ತಿಗೆ ಮಾತನಾಡಿ, ಬೀ-ಹ್ಯೂಮನ್ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ನಾವು ಎಲ್ಲರೂ ಬೀ-ಹ್ಯೂಮನ್ ಸಂಸ್ಥೆಯೊಂದಿಗೆ ಕೈಜೋಡಿಸಿ ಸಂಸ್ಥೆಯ ಏಳಿಗೆಗೆ ಶ್ರಮಿಸೋಣ ಎಂದು ಹೇಳಿದರು.
ಆಸ್ಪತ್ರೆಯ ಮುಖ್ಯಸ್ಥೆ ಡಾ. ಅಕ್ಷತಾ ಮಾತನಾಡಿ, ರೋಗಿಗಳು ಮತ್ತು ಭೇಟಿಗಾರರಿಗೆ ಶುದ್ಧ ಕುಡಿಯುವ ನೀರಿನ ವಿತರಣಾ ಯಂತ್ರ, ಟಿವಿ ಹಾಗೂ ಕುರ್ಚಿಗಳ ಮಹತ್ವವನ್ನು ವಿವರಿಸಿ, ದೇಣಿಗೆ ನೀಡಿದ ಬೀ-ಹ್ಯೂಮನ್ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಆಸೀಫ್ ಡೀಲ್ಸ್ ಮಾತನಾಡಿ, ಮೂಡಬಿದ್ರಿ ತಂಡದ ಪ್ರಾಮಾಣಿಕ ಬೆಂಬಲಕ್ಕೆ ತಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಈ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲು ಅವರ ಸಹಕಾರವೇ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆಯೇ, ಬೀ-ಹ್ಯೂಮನ್ ಸಂಸ್ಥೆಯೊಂದಿಗೆ ಸಹಯೋಗ ಮಾಡಲು ಇಚ್ಛಿಸುವವರನ್ನು ತಂಡದಲ್ಲಿ ಸೇರಿಕೊಳ್ಳಲು ಆಹ್ವಾನಿಸಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಸಲಾಂ ತೋಡಾರು, ಬೀ-ಹ್ಯೂಮನ್‌ನ ಟ್ರಸ್ಟಿ ಶೆರೀಫ್ ಬೋಳಾರ್ (ವೈಟ್‌ಸ್ಟೋನ್), ಇಮ್ರಾನ್ ಹಸನ್, ನವಾಜ್ (ವೈಟ್‌ಸ್ಟೋನ್), ಇಮ್ತಿಯಾಜ್ ಗೋಲ್ಡನ್, ಅಬುಲಾಲ ಪುತ್ತಿಗೆ, ಹನೀಫ್ ರಹ್ಮಾನಿಯಾ, ಮಾಲಿಕ್ ಅಝೀಝ್, ಅಝ್ವೀರ್, ಅಲ್‌ಪುರ್ಖಾನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶಾಹಮ್, ಅಶ್ರಫ್ ಮರೋಡಿ, ಶಾಫಿ ಪಡ್ಡಂದಡ್ಕ, ಬೀ-ಹ್ಯೂಮನ್ ಮೆಡಿಕಲ್ ಇಂಚಾರ್ಜ್ ಹನೀಫ್ ತೋಡಾರು, ಯಾಸೀರ್ ಹುಸೈನ್, ಅಡ್ವೋಕೆಟ್ ಎನ್.ಜಿ. ಇರ್ಷಾದ್, ಕೆ.ಎಸ್. ಅಬೂಬಕ್ಕರ್, ಆಸ್ಪತ್ರೆಯ ಸಿಬ್ಬಂದಿಯಾದ ರೇಖಾ ಮತ್ತು ಡಯಾಲಿಸಿಸ್ ಸೆಂಟರ್ ಇಂಚಾರ್ಜ್ ರಕ್ಷಿತ್ ಕೆ.ಜಿ. ಹಾಗೂ ಬೀ-ಹ್ಯೂಮನ್ ಸಂಸ್ಥೆಯ ಸಂಸ್ಥಾಪಕ ಆಸೀಫ್ ಡೀಲ್ಸ್ ಉಪಸ್ಥಿತರಿದ್ದರು.