ಚಕ್ರವರ್ತಿ ಸೂಲಿಬೆಲೆ ಮೇಲೆ ಸುಳ್ಳು ಕೇಸು ದಾಖಲು: ವಿಹೆಚ್‌ಪಿ, ಬಜರಂಗದಳ ಖಂಡನೆ

ಚಕ್ರವರ್ತಿ ಸೂಲಿಬೆಲೆ ಮೇಲೆ ಸುಳ್ಳು ಕೇಸು ದಾಖಲು: ವಿಹೆಚ್‌ಪಿ, ಬಜರಂಗದಳ ಖಂಡನೆ

ಮಂಗಳುರು: ಪ್ರತಿ ವರ್ಷದಂತೆ ಈ ವರ್ಷ ಮಾ.9 ರಂದು ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆ ಕಾರ್ಯಕ್ರಮ ನಡೆಯಿತು. ನಮ್ಮ ತುಳುನಾಡಿನ ಆರಾಧ್ಯ ಶಕ್ತಿ ಕೊರಗಜ್ಜ, ಭಕ್ತಿ, ಶ್ರದ್ದೆಯಿಂದ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 

ಈ ಕಾರ್ಯಕ್ರಮದಿಂದ ಯಾರಿಗೂ ತೊಂದರೆಯಾಗಿಲ್ಲ ಮತ್ತು ಈ ಕಾರ್ಯಕ್ರಮದಲ್ಲಿ ಯಾವ ಮತದ ವಿರುದ್ಧ ದ್ವೇಷಪೂರಿತವಾಗಿ ಚಕ್ರವರ್ತಿ ಸೂಲಿಬೆಲೆಯವರು ಉದ್ರೇಕಕಾರಿಯಾಗಿ ಭಾಷಣ ಮಾಡಿಲ್ಲ. ಕಾರ್ಯಕ್ರಮವನ್ನು ಸಹಿಸದ ಹಿಂದೂ ವಿರೋಧಿ ಶಕ್ತಿಗಳು ಸುಳ್ಳು ದೂರನ್ನು ನೀಡಿ, ಹಿಂದೂ ವಿರೋಧಿ ರಾಜ್ಯ ಸರಕಾರದ ಒತ್ತಡದಿಂದ ಚಕ್ರವರ್ತಿ ಸೂಲಿಬೆಲೆ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ. ಈ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸುತ್ತೇವೆ ಮತ್ತು ಚಕ್ರವರ್ತಿ ಸೂಲಿಬೆಲೆ ಮೇಲೆ ಹಾಕಿರುವ ಸುಳ್ಳು ಕೇಸನ್ನು ತಕ್ಷಣ ವಾಪಸು ಪಡೆಯಲು ಜಿಲ್ಲಾಡಳಿತವನ್ನು ಆಗ್ರಹಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷದ್ ಧರ್ಮ ಯಾತ ಸಂಘದ ಪ್ರಮುಖರಾದ ಹಾಗೂ ಕೊರಗಜ್ಜನ ಅದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಸಂಯೋಜಕ ಪ್ರವೀಣ್ ಕುತ್ತಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article