ಮನೆಗೆ ಹೋಗಲು ಒಪ್ಪದ ದಿಗಂತ್

ಮನೆಗೆ ಹೋಗಲು ಒಪ್ಪದ ದಿಗಂತ್


ಮಂಗಳೂರು: ಬಂಟ್ವಾಳ ಫರಂಗಿಪೇಟೆ ನಿವಾಸಿ ದಿಗಂತ್ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂದು ಬಂಟ್ವಾಳ ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ  ಉಲ್ಲೇಖವಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ದಿಗಂತ್ ಪತ್ತೆ ಬಗ್ಗೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್‌ನಲ್ಲಿ ದಿಗಂತ್ ಪತ್ತೆಯಾದ ಬಗ್ಗೆ ಹಾಗೂ ದಿಗಂತ್ ಹೇಳಿಕೆಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಇಂದು ಹೈ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಯಿತು.

ವಿಚಾರಣೆ ವೇಳೆ, ಪೊಲೀಸರ ಪರ ವಕೀಲರು ‘ದಿಗಂತ್ ಪೋಷಕರ ಬಳಿ ಹೋಗಲು ನಿರಾಕರಿಸುತ್ತಿರುವ ಬಗ್ಗೆ ಹೈಕೋರ್ಟ್‌ಗೆ ತಿಳಿಸಿದರು. ಇದೇ ವೇಳೆ ಮಗನನ್ನು ಕಳುಹಿಸಿ ಕೊಡುವಂತೆ ದಿಗಂತ್ ಫೋಷಕರು ಹೈಕೋರ್ಟ್ಗೆ ಮನವಿ ಮಾಡಿಕೊಂಡರು.

ದಿಗಂತ್ ಪೋಷಕರ ಪರ ವಕೀಲರು: “ದಿಗಂತ್ ಪತ್ತೆಯಾದ ದಿನ ತಾಯಿ ಜೊತೆ ಫೋನ್ನಲ್ಲಿ ಮಾತನಾಡಿದ ವಿವರ ನ್ಯಾಯಪೀಠಕ್ಕೆ ತಿಳಿಸಿದರು. ನಾನಾಗಿಯೇ ಹೋಗಿಲ್ಲ, ನನ್ನನ್ನು ಯಾರೋ ಕರೆದು ಕೊಂಡು ಹೋಗಿದ್ದಾರೆ ಅಂತ ದಿಗಂತ್ ಎಂದಿದ್ದನ್ನು ಕೋರ್ಟ್ ಮುಂದೆ ಪ್ರಸ್ತಾಪಿಸಿದರು.

ಆದರೆ, ದಿಗಂತ್ ಅವನಾಗಿಯೇ ಹೋಗಿರುವುದಾಗಿ ಹೇಳಿದ್ದಾನೆ. ಅವನು ಯಾವುದೇ ಅನಧಿಕೃತ ಬಂಧನಕ್ಕೆ ಒಳಗಾಗಿರಲಿಲ್ಲ. ಪರೀಕ್ಷೆ ಭಯದಿಂದ ತಾನಾಗಿಯೇ ಹೋಗಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ಪೊಲೀಸರ ವರದಿಯಲ್ಲಿದೆ.

ಪಿಯುಸಿ ಪರೀಕ್ಷೆ ಇನ್ನೂ ಮುಗಿಯದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೋಷಕರು ಇದೇ ವೇಳೆ ಮನವಿ ಮಾಡಿದರು. ದಿಗಂತ್ ಸದ್ಯ ಮಂಗಳೂಉ ಬೊಂದೆಲ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿದ್ದಾನೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article