
ಪ್ರತಿಭಟನೆಯ ಮೂಲಕ ಮಹಿಳಾ ದಿನಾಚರಣೆ
ಮಂಗಳೂರು: ಜಮಾಅತೆ ಇಸ್ಲಾಮಿ ಹಿಂದ್, ಮಹಿಳಾ ವಿಭಾಗ ಮಂಗಳೂರು ಹಾಗೂ ಸಮಾನ ಮನಸ್ಕ ಮಹಿಳೆಯರು ಸೇರಿ ಇಂದು ಮಂಗಳೂರು ಮಿನಿ ವಿಧಾನಸೌಧದ ಎದುರು ಮಹಿಳಾ ದಿನಾಚರಣೆಯನ್ನು ವಿನೂತನ ಶೈಲಿಯಲ್ಲಿ ಮೌನವಾಗಿ ಪ್ರತಿಭಟಿಸಿ ಆಚರಿಸಿದರು.
ಇಂದು ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರ, ಕೊಲೆ, ಶೋಷಣೆ ಹಾಗೂ ಅಕ್ರಮಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳು ಜರಗದೇ ಇರುವುದು ಹಾಗೂ ಪ್ರಕ್ರಿಯೆಗಳು ವಿಳಂಬಗೊಳ್ಳುತ್ತಿರುವುದನ್ನು ವಿರೋಧಿಸಿ ಅವರು ಭಿತ್ತಿ ಫಲಕಗಳನ್ನು ಪ್ರದರ್ಶಿಸುವುದರ ಮೂಲಕ ಮೌನವಾಗಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಸಹನಾ ವಿಮೆನ್ಸ್ ಕೌನ್ಸಿಲಿಂಗ್‌ನ ಶಹನಾಝ್ ಎಂ, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕಿ ಸಾಜಿದಾ ಮೂಮಿನ್, ಫಾರ್ವರ್ಡ್ ಕೌನ್ಸಿಲಿಂಗ್ ನ ರಹಮತ್ ಮನ್ಸೂರ್, ವೆಲ್ಫೇರ್ ಪಾರ್ಟಿಯ ಮರಿಯಮ್ ಶಹೀರ ,ಸಮಾಜ ಸೇವಕಿ ಹರಿಣಿ,ಔರಾ ಇ ಮ್ಯಾಗಝಿನ್ ಸಂಪಾದಕಿ ಸಮೀನ ಅಫ್ಶಾನ್, ಅನುಪಮ ಮಹಿಳಾ ಮಾಸಿಕದ ಸಹ ಸಂಪಾದಕಿ ಶಹೀದ ಉಮರ್ ಮೊದಲಾದವರು ಉಪಸ್ಥಿತರಿದ್ದರು .
ಪ್ರತಿಭಟನೆಯ ಬಳಿಕ ರಾಷ್ಟ್ರಪತಿಯವರಿಗೆ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.