.jpeg)
ಗೋರಕ್ಷಕರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ, ಆರೋಪಿಗಳ ವಿರುದ್ಧ ಗೂಂಡಾ ಕಾಯಿದೆ ದಾಖಲಿಸಿ: ಶರಣ್ ಪಂಪುವೆಲ್
Friday, March 28, 2025
ಮಂಗಳೂರು: ಮಂಗಳೂರು ಸೂರಲ್ಪಾಡಿ ಮಸೀದಿ ಬಳಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಹತ್ಯೆ ಮಾಡಲು ಅಕ್ರಮ ಸಾಗಾಟ ನಡೆಸುತ್ತಿರುವ ಸಂಧರ್ಭ, ಅದನ್ನು ತಡೆಯುವಾಗ ಗೋರಕ್ಷಕರ ಜೊತೆಯಿದ್ದ ಚಂದನ್ ಭಟ್ ಅವರ ವಾಹನದ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಮಾಡಿರುವ ಕೃತ್ಯ ನಡೆದಿದ್ದು, ಈಗಾಗಲೇ ಚಂದನ್ ಭಟ್ ಅವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಗೋಸಾಗಾಟ, ಅಕ್ರಮ ಗೋಮಾಂಸ ಮಾರಾಟವು ಮಿತಿ ಮೀರುತ್ತಿದ್ದು ಕಳೆದ 10 ದಿನಗಳಲ್ಲಿ 6 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇದೀಗ ಗೋಸಾಗಾಟಗಾರರು ಅಕ್ರಮ ಗೋಸಾಗಾಟ ಮಾಡುವುದರೊಂದಿಗೆ ಅಕ್ರಮ ಪಿಸ್ತೂಲುಗಳನ್ನು ಬಳಸಿ ಗೋರಕ್ಷಕರ ಕೊಲೆಗೆ ಪ್ರಯತ್ನಿಸುತ್ತಿರುವುದು ಬಹಳ ಆತಂಕಕಾರಿಯಾಗಿದೆ.
ಇದೊಂದು ಭಯೋದ್ಪಾದಕ ಕೃತ್ಯವಾಗಿದ್ದು, ಈ ಕೂಡಲೇ ನೈಜ ಆರೋಪಿಗಳನ್ನು ಬಂಧಿಸಿ, ಅವರ ಮೇಲೆ ಅಕ್ರಮ ಗೋಸಾಗಾಟ, ಗೋಕಳ್ಳತನ, ಗೋಹತ್ಯೆ ಕೇಸು, ಎಆರ್‌ಎಂಎಸ್ ಆಕ್ಟ್ ಧಾಖಲಿಸುವುದರೊಂದಿಗೆ, ಗೂಂಡಾ ಕಾಯಿದೆ ಅಡಿ ಬಂಧಿಸಿ ಕ್ರಮಕೈಗೊಳ್ಳುವಂತೆ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.