ವಿಜ್ಞಾನ ಕಲಿತ ವಿದ್ಯಾರ್ಥಿಗಳಿಗೆ ಎಲ್ಲಾ ಕಡೆಗಳಲ್ಲೂ ಅವಕಾಶವಿದೆ: ಡಾ. ಅರುಣ್ ಇಸ್ಲೂರ್

ವಿಜ್ಞಾನ ಕಲಿತ ವಿದ್ಯಾರ್ಥಿಗಳಿಗೆ ಎಲ್ಲಾ ಕಡೆಗಳಲ್ಲೂ ಅವಕಾಶವಿದೆ: ಡಾ. ಅರುಣ್ ಇಸ್ಲೂರ್


ಮಂಗಳೂರು: ವಿಜ್ಞಾನವನ್ನು ಕಲಿತ ವಿದ್ಯಾರ್ಥಿಗಳಿಗೆ ಎಲ್ಲಾ ಕಡೆಗಳಲ್ಲೂ ಅವಕಾಶವಿದ್ದು, ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸುರತ್ಕಲ್ ನ ಎನ್.ಐ.ಟಿ.ಕೆ.ಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಅರುಣ್ ಇಸ್ಲೂರ್ ಹೇಳಿದರು.


ಅವರು ಇಂದು ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ‌ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ವಿಜ್ಞಾನ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಸರ್ ಸಿ.ವಿ.‌ ರಾಮನುಜನ್ ಅವರು ತನ್ನ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಕೇವಲ 2 ವರ್ಷದಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ಲಭಿಸಿತು. ಅವರು ದೇಶದ ಅತ್ಯುತ್ತಮ ಹುದ್ದೆಯಾಗಿದ್ದ ಐ.ಎಫ್.ಎಸ್.ನಲ್ಲಿ ಕೆಲಸ ಮಾಡುತ್ತಲೇ ಐ.ಎ.ಸಿ.ಎಸ್.ನಲ್ಲಿ ಸಂಶೋಧನೆ ನಡೆಸಿ, ನಡುವಿನಲ್ಲಿ ಐ.ಎಫ್.ಎಸ್.ಗೆ ರಾಜಿನಾಮೆ ನೀಡಿ ತುಲಿಕ್ ಪ್ರೊಫೆಸರ್ ಶಿಫ್ ನಲ್ಲಿ ಸಂಶೋಧನೆ ನಡೆಸಿ 1928 ಫೆ.28 ರಂದು ಸಂಶೋಧನಾ ಪ್ರಬಂಧ ಮಂಡಿಸಿದ ಅವರು 1930 ರಲ್ಲಿಯೇ ಅವನ್ನು ಹರಸಿ ನೋಬೆಲ್ ಪ್ರಶಸ್ತಿ ಬಂತು. ಕೇವಲ 2 ವರ್ಷದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಸಿ.ವಿ. ರಾಮನ್ ಅವರು ಎಂದರು.


2025ರಲ್ಲಿ ವಿಶ್ವ ವಿಜ್ಞಾನ ದಿನಾಚರಣೆಯನ್ನು 'ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಯುವ ಜನತೆಯನ್ನು ಜಾಗತಿಕ ಮಟ್ಟದಲ್ಲಿ ವಿಶ್ವಗುರುವನ್ನಾಗಿಸುವುದು' ಎಂಬ ಘೋಷ ವಾಕ್ಯದೊಂದಿಗೆ ಆಚರಿಸುತ್ತಿದ್ದು, ಯುವ ಜನತೆಯಲ್ಲಿ ವಿಜ್ಞಾನದ ಬಗ್ಗೆ ಆಶಕ್ತಿ ಮೂಡಿಸುವುದು, ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ವಿಷಯದ ಬಗ್ಗೆ ಹೆಚ್ಚು ಅದ್ಯಯನ ನಡೆಸುವುದು, ಕೈಗಾರಿಕೆ ಮತ್ತು ಸಂಸ್ಥೆಗಳೊಂದಿಗೆ ಅದ್ಯಯನದ ಬಗ್ಗೆ ಸಂವಾಹನ ನಡೆಸುವುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಪದವಿ ವಿಭಾಗದ ಸಂಯೋಜಕರಾದ ಪ್ರೊ. ವಸಂತಿ ಪಿ., ಡಾ. ಕೃಷ್ಣಪ್ರಭಾ, ಡಾ. ಅಶೋಕ್, ಡಾ. ಮೋಹನ್ ದಾಸ್ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ಸಂಯೋಜಕರಾದ ಡಾ. ರಮಕಾಂತ್ ಪುರಾಣಿಕ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಅರ್ಚನ ವಂದಿಸಿದರು.










Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article