
ಶ್ರೀ ಕ್ಷೇತ್ರ ಪುತ್ತಿಗೆಯಲ್ಲಿ ಬ್ರಹ್ಮಕಲಶಾಭಿಷೇಕ
Thursday, March 6, 2025
ಮೂಡುಬಿದಿರೆ: ಶ್ರೀಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಳದಲ್ಲಿ ಗುರುವಾರ ಬೆಳಗ್ಗೆ ಶ್ರೀ ಸೋಮನಾಥೇಶ್ವರ ದೇವರು ಹಾಗೂ ಶ್ರೀ ಮಹಿರ್ಷಮರ್ದಿನಿ ದೇವಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು.
ಶ್ರೀ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕುಲದೀಪ ಎಂ, ಗೌರವಾಧ್ಯಕ್ಷ ವೀರೇಂದ್ರ ಎಂ, ಶ್ರೀ ಕ್ಷೇತ್ರ ಧರ್ಮಸ್ಥಳದ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಗೌರವಾಧ್ಯಕ್ಷ ವೀರೇಂದ್ರ ಎಂ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಕ್ಷೇತ್ರದ ಪ್ರಧಾನ ಅರ್ಚಕ ವೇ ಮೂ.ಅಡಿಗಳ್ ಪಿ ಅನಂತಕೃಷ್ಣ ಭಟ್, ಸಮಿತಿಯ ಕಾರ್ಯಧ್ಯಕ್ಷ ನೀಲೇಶ್ ಶೆಟ್ಟಿ, ಉಪಾಧ್ಯಕ್ಷರಾದ ಶಿವಪ್ರಸಾದ್ ಆಚಾರ್ ಕುಂಗೂರು, ಶ್ರೀಕಾಂತ್ ರಾವ್, ವಿದ್ಯಾರಮೇಶ ಭಟ್, ವಾದಿರಾಜ ಮಡ್ಮಣ್ಣಾಯ ಮತ್ತಿತರರು ಉಪಸ್ಥಿತರಿದ್ದರು.
ರಾತ್ರಿ ಯಕ್ಷ ಧ್ರುವ ಪಟ್ಲ ಫೌಂಡೇಶನ್‌ನ ಪಟ್ಲ ಸತೀಶ್ ಶೆಟ್ಟಿ ತಂಡದಿಂದ ಯಕ್ಷ-ಗಾನ ವೈಭವ, ನೃತ್ಯೋಲ್ಲಾಸ ಆಳ್ವಾಸ್ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಭಜನಾ ಕಾರ್ಯಕ್ರಮ ನಡೆಯಿತು.