ಪುತ್ತಿಗೆ ಬ್ರಹ್ಮಕಲಶ-ಧಾರ್ಮಿಕ ಸಭೆ

ಪುತ್ತಿಗೆ ಬ್ರಹ್ಮಕಲಶ-ಧಾರ್ಮಿಕ ಸಭೆ


ಮೂಡುಬಿದಿರೆ: ದಕ್ಷವಾದ ರಾಜ, ಇಂದಿನ ಕಾಲದಲ್ಲಿ ಧಾರ್ಮಿಕ ಮುಖಂಡನಿದಲ್ಲಿ ದೇವಸ್ಥಾನ, ಅಲ್ಲಿನ ವ್ಯವಸ್ಥೆಗಳನ್ನು ಉಳಿಸಲು ಸಾಧ್ಯ. ಅಂತಹ ಕೆಲಸ ಪುತ್ತೆಯಲ್ಲಿ ಆಗಿದೆ. ಪುತ್ತಿಗೆ ಸೋಮನಾಥೇಶ್ವರ ದೇವಳದ ಬ್ರಹ್ಮಕಲಶದಿಂದ ಹಿಂದೂ ಧರ್ಮದ ಪುನರುತ್ಥಾನವಾಗಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು. 

ಪುತ್ತಿಗೆ ಮಹೋತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. 

ಹಿಂದೂ ಸಮಾಜ ದಾನ ಮತ್ತು ಧರ್ಮಕ್ಕೆ ಪ್ರತೀಕವಾದ ಪರಂಪರೆಯನ್ನು ಹೊಂದಿದೆ. ದೇವಾಲಯಗಳಲ್ಲಿರುವ ಸಂಪತ್ತನ್ನು ಕೊಳ್ಳೆ ಹೊಡೆಯುವ ಹುನ್ನಾರವನ್ನು ಈಗಿನ ಸರ್ಕಾರಗಳು ಮಾಡುತ್ತಿವೆ ಎಂದು ಖೇಧ ವ್ಯಕ್ತ ಪಡಿಸಿದರು.

ಡಾ.ಅರುಣ್ ಉಳ್ಳಾಲ ಧಾರ್ಮಿಕ ಉಪನ್ಯಾಸ ನೀಡಿ, ನಾವಿಂದು ಅಧುನೀಕರಣಕ್ಕೆ ತೆರೆದುಕೊಂಡಂತೆ ನಮ್ಮ ಸಂಸ್ಕೃತಿ ಮಾತ್ರವಲ್ಲ, ಊರು ಸಹಿತ ವಿವಿಧ ವಿಚಾರಗಳ ಮೂಲ ಹೆಸರುಗಳಲ್ಲಿ ಬದಲಾಯಿಸುತ್ತಿದ್ದೇವೆ. ಆದರೆ ಶ್ರೀಕ್ಷೇತ್ರ ಪುತ್ತಿಗೆಯ ಬ್ರಹ್ಮಕಲಶದ ಸಂಭ್ರಮದ ನಡುವೆಯೂ ಕ್ಷೇತ್ರದ ಮೂಲ ಹೆಸರು `ಪುತ್ತೆ' ಎನ್ನುವುದನ್ನು ಹೈಲೈಟ್ ಮಾಡಿರುವುದು ಉತ್ತಮ ವಿಚಾರ. ಸಮರ್ಥ ಆಡಳಿತ ಮಂಡಳಿಯೊಂದಿಗೆ ಸಹಸ್ರಾರು ಕರಸೇವಕರು ತಮ್ಮಿಂದ ಸಾಧ್ಯವಾಗುವಷ್ಟು ಸೇವೆಯನ್ನು ಮಾಡಿರುವುದರಿಂದ ಪುತ್ತೆ ಬ್ರಹ್ಮಕಲಶವು ಮಾದರಿ ಬ್ರಹ್ಮಕಲಶವಾಗಿದೆ ಎಂದರು. 

ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಗವಂತ ನಮ್ಮಲ್ಲಿದ್ದಾನೆ. ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳಬೇಕು. ನಮ್ಮಲ್ಲಿರುವ ಅಹಂಕಾರವನ್ನು ದೂರ ಮಾಡಿ ಸರಳ ಜೀವನವನ್ನು ಮಾಡಿದಲ್ಲಿ ದೇವರಿಗೆ ಹತ್ತಿರವಾಗುತ್ತೇವೆ. ಪುತ್ತಿಗೆ ಬ್ರಹ್ಮಕಲಶದ ಇಡೀ ವಿಚಾರಧಾರೆ ಪುಸ್ತಕದ ರೂಪದಲ್ಲಿ ಮುಂದಿನ ದಿನಗಳಲ್ಲಿ ಬರುವಂತಾಗಲಿ ಎಂದರು. 

ಜೀರ್ಣೋದ್ಧಾರ ಕೆಲಸಕ್ಕೆ ಪ್ರಥಮ ಹಂತದಲ್ಲಿ ಸಹಕರಿಸಿದ ಎಂಸಿಎಸ್ ಬ್ಯಾಂಕ್‌ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಹಾಗೂ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಅವರನ್ನು ಸನ್ಮಾನಿಸಲಾಯಿತು. ಸ್ವಾಗತ ಗೋಪುರ ಕೊಡುಗೆ ನೀಡಿದ ಪುತ್ತಿಗೆಗುತ್ತು ನೀಲೇಶ್ ಶೆಟ್ಟಿ ಕೊಲಕಾಡಿ, ಎರಡನೇ ಅಂಗಣದ ನೆಲ ಹಾಸಿನ ಕೊಡುಗೆಯಾಗಿ ನೀಡಿದ ಪುತ್ತಿಗೆ ಮುರಂತಕೋಡಿ ವಾಸುದೇವ ಭಟ್, ಅಂಕುರ ಕೋಣೆಯ ಕೊಡುಗೆ ನೀಡಿದ ಅನಿತಾ ತಂತ್ರಿಯವರ ಪರವಾಗಿ ಶ್ರೀನಿವಾಸ ಭಟ್ , ಸೋಮನಾಥ ದೇವರ ಅಗ್ರಸಭೆಯ ಮರದ ಬಾಗಿಲನ್ನು ಒದಗಿಸಿದ ಜನಾರ್ದನ ಪ್ರಭು ಗುಡ್ಡೆಯಂಗಡಿ, ದೇವಳದ ಎದುರಿನ ಸೇತುವೆಯ ಜಾಗವನ್ನು ದಾನವಾಗಿ ನೀಡಿದ ನಾಗವರ್ಮ ಜೈನ್ ಅವರನ್ನು ಗೌರವಿಸಲಾಯಿತು. 

ಶ್ರೀಕ್ಷೇತ್ರ ಕಟೀಲಿನ ಲಕ್ಷ್ಮೀ ನಾರಾಯಣ ಆಸ್ರಣ್ಣ, ಮೂಡುವೇಣುಪುರ ಶ್ರೀ ವೆಂಕಟರಮಣ ಹಾಗೂ ಶ್ರೀ ಹನುಮಂತ ದೇವಳಗಳ ಆಡಳಿತ ಮೊಕ್ತೇಸರ ಉಮೇಶ್ ಜಿ. ಪೈ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಜೀರ್ಣೋದ್ಧಾರ ಸಮಿತಿಯ ಪ್ರಮುಖ ಕೆ.ಶ್ರೀಪತಿ ಭಟ್ ಉಪಸ್ಥಿತರಿದ್ದರು. 

ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article