
ಪುತ್ತಿಗೆ: 2 ಕೋ.ರೂ. ವೆಚ್ಚದ ನೂತನ ಸೇತುವೆ-ದಾನಿಗಳ ಸಹಕಾರದ ಸಂಪಿಗೆ ದ್ವಾರ ಲೋಕಾಪ೯ಣೆ
Saturday, March 1, 2025
ಮೂಡುಬಿದಿರೆ: ಬ್ರಹ್ಮ ಕಲಶೋತ್ಸವದ ಸಂಭ್ರಮದಲ್ಲಿರುವ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಪಕ೯ ಕಲ್ಪಿಸುವ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಿರು ಸೇತುವೆಯನ್ನು ಮತ್ತು ಶಾಸಕರ ಸಹಕಾರದೊಂದಿಗೆ ಸಂಪಿಗೆಯಲ್ಲಿ ನಿಮಾ೯ಣಗೊಂಡಿರುವ ನೂತನ ಸ್ವಾಗತ ದ್ವಾರವನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆ ಕುಲದೀಪ ಎಂ., ಪ್ರಧಾನ ಅಚ೯ಕ ಅಡಿಗಳ್ ಪಿ. ಅನಂತಕೃಷ್ಣ ಭಟ್ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಶನಿವಾರ ಸಂಜೆ ಲೋಕಾಪ೯ಣೆಗೊಳಿಸಿದರು.
ದಾನಿ ಮುಗ್ರೋಡಿ ಸುಧಾಕರ ಶೆಟ್ಟಿ ಮತ್ತು ಇತರ ದಾನಿಗಳು, ಸಂಪಿಗೆ ಚಚಿ೯ನ ಧಮ೯ಗುರು ವಿನ್ಸೆಂಟ್ ಡಿ’ಸೋಜ, ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಡಾ. ಯೋಗಿ ಸುಧಾಕರ ತಂತ್ರಿ, ಪಂಚಾಯತ್ ಸದಸ್ಯರಾದ ದಿನೇಶ್ ಗೌಡ, ಸಾರಿಕಾ, ಅಪ್ಪಿ, ಸುಮಾ ಭಟ್, ಮಾಜಿ ಸದಸ್ಯರಾದ ನಾಗವರ್ಮ ಜೈನ್, ನಾಗರಾಜ ಕರ್ಕೇರ, ಕಾಯರಬೆಟ್ಟು ಶಂಕರ ಮೂರ್ತಿ, ರಂಜಿತ್ ಪೂಜಾರಿ ತೋಡಾರು, ಉದಯ ಶೆಟ್ಟಿ ಕೊಡ್ಯಡ್ಕ, ಶಶಿಧರ ಅಂಚನ್ ಎನಿಕ್ರಿಪಲ್ಲ ಮತ್ತಿತರರು ಉಪಸ್ಥಿತರಿದ್ದರು.
ಸೇತುವೆ ನಿರ್ಮಾಣವಾದ ತಾಣದಲ್ಲಿ ರಿಚಾರ್ಡ್ ಅವರು ಬಿಟ್ಟು ಕೊಟ್ಟ 19 ಸೆಂಟ್ಸ್ ಜಾಗಕ್ಕೆ ಬದಲಿಯಾಗಿ ನಾಗವರ್ಮ ಜೈನ್ ಅವರು ತಮ್ಮ ಸ್ವಂತ ಜಾಗದಲ್ಲಿ ಅಷ್ಟೇ ಜಾಗವನ್ನು ಸೂಕ್ತ ದಾಖಲೆ ಪತ್ರಗಳೊಂದಿಗೆ ಒದಗಿಸಿಕೊಟ್ಟಿದ್ದಾರೆ.