
ಆಳ್ವಾಸ್‌ನಲ್ಲಿ 22ನೇ ವಷ೯ದ ಇಫ್ತಾರ್ ಕೂಟ
Saturday, March 15, 2025
ಮನುಷ್ಯನ ಮನಸ್ಸು ಸ್ವಚ್ಛಗೊಳಿಸುವ ಆರಾಧನೆ ರಂಝಾನ್: ಅಬ್ದುಲ್ಲಾ ಕುಂಞಿ
ಮೂಡುಬಿದಿರೆ: ಮನುಷ್ಯನ ಮನಸ್ಸು ಸ್ವಚ್ಛ ಗೊಳಿಸುವ ಆರಾಧನೆ ರಮ್ ಝಾನ್. ಇದು ಮನುಷ್ಯನನ್ನು ಕೆಡುಕುಗಳಿಂದ ಒಳಿತಿನೆಡೆಗೆ ಆಹ್ವಾನಿಸುವ, ಒಳಿತಿನೊಂದಿಗೆ ಮುನ್ನಡೆಸುವ ಮತ್ತು ಕೆಡುಕುಗಳಿಗೆ ಕಡಿವಾಣ ಹಾಕುವ ಆರಾಧನೆಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಶಾಂತಿ ಪ್ರಕಾಶನದ ಅಬ್ದುಲ್ಲಾ ಕುಂಞಿ ಹೇಳಿದರು.
ಅವರು ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ (ರಿ)ದ ವತಿಯಿಂದ ಶನಿವಾರ ಕೃಷಿ ಸಿರಿ ವೇದಿಕೆಯಲ್ಲಿ ನಡೆದ 22ನೇ ವರ್ಷದ ‘ಆಳ್ವಾಸ್ ಇಫ್ತಾರ್ ಕೂಟ-2025’ ಸಮಾರಂಭದಲ್ಲಿ ರಮಝಾನ್ ಕುರಿತು ಸಂದೇಶ ನೀಡಿದರು.
ಜಗತ್ತಿನ ಎಲ್ಲಾ ಮಾಲಿನ್ಯಗಳಿಗೆ ಮನುಷ್ಯನ ಮನಸ್ಸು ಮಲಿನವಾಗಿರುವುದೇ ಕಾರಣ ಎಂದ ಅವರು, ಕೆಡುಕುಗಳನ್ನು ಕೆಡುಕುಗಳ ಮೂಲಕ ನಿವಾರಿಸಲು ಅಸಾಧ್ಯ. ಅದನ್ನು ಪ್ರೀತಿ, ಭ್ರಾತೃತ್ವದ ಸಂದೇಶಶದ ಮೂಲಕ ನಿವಾರಿಸಬೇಕು. ಕೆಲ ಶಕ್ತಿಗಳು ಎಲ್ಲೆಡೆ ದ್ವೇಷ ಹರಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಇಫ್ತಾರ್ ಕೂಟ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ.
ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಭಾರತ್ ಮುಸ್ತಫಾ, ಶಾಹಿನ್ ಖದೀರ್ ಮತ್ತಿತರರು ಉಪಸ್ಥಿತರಿದ್ದರು.
ಅಬುಲಾಲ ಪುತ್ತಿಗೆ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.